ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗಣರದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಆಯಂಟಿಗುವಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಡೋಮಿನಿಕಾದಿಂದ ಆಯಂಟಿಗುವಾ ಪ್ರವೇಶಿಸಿದ ವೇಳೆ ಬಂಧನಕ್ಕೊಳಗಾಗಿರುವ ಚೋಕ್ಸಿ ಕರೆತರುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇದರ ನಡುವೆ ಚೋಕ್ಸಿ ಹೇಳಿಕೆಗಳು ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.
ಆಯಂಟಿಗುವಾದಲ್ಲಿ ಬಂಧನಕ್ಕೊಳಗಾಗಿರುವ ಚೋಕ್ಸಿಗೆ ಜಾಮೀನು ನಿರಾಕರಿಸಿರುವ ಕೋರ್ಟ್, ಭಾರತಕ್ಕೆ ಗಡೀಪಾರು ಕುರಿತು ಮತ್ತೊಂದು ವಿಚಾರಣೆ ನಡೆಯಲಿದೆ ಎಂದಿದೆ. ಇದರ ನಡುವೆ ಚೋಕ್ಸಿ, ನಾನು ಭಾರತದಿಂದ ಪಲಾಯನ ಮಾಡಿಲ್ಲ, ಕೇವಲ ಚಿಕಿತ್ಸೆಗಾಗಿ ಆಯಂಟಿಗುವಾಗೆ ಬಂದಿದ್ದೇನೆ ಎಂದಿದ್ದಾರೆ.
ಭಾರತದಿಂದ ವಿದೇಶಕ್ಕೆ ಹಾರಿ ತಲೆಮೆರಿಸಿಕೊಂಡಿದ್ದ ಮೆಹುಲ್ ಚೋಕ್ಸಿ ಹೇಳಿಕೆಗೆ ಭಾರತೀಯ ಅಧಿಕಾರಿಗಳು ಸುಸ್ತಾಗಿದ್ದಾರೆ.
ನಾನು ಭಾರತದಿಂದ ವಿದೇಶಕ್ಕೆ ತೆರಳುವಾಗ ನನ್ನ ವಿರುದ್ಧ ಯಾವುದೇ ವಾರೆಂಟ್ ಇರಲಿಲ್ಲ. ಚಿಕಿತ್ಸೆಗಾಗಿ ತುರ್ತು ಆಯಂಟಿಗುವಾಗೆ ಬಂದಿದ್ದೇನೆ. ಹೀಗಾಗಿ ಪಲಾಯನದ ಪ್ರಶ್ನೆ ಇಲ್ಲ. ಇನ್ನು ಭಾರತೀಯ ಅಧಿಕಾರಿಗಳು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದು 62 ವರ್ಷದ ಮೆಹುಲ್ ಚೋಕ್ಸಿ ಡೋಮಿನಿಕಾ ಕೋರ್ಟ್‌ಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಹೇಳಿದ್ದಾರೆ.

