Dailyhunt Logo
  • Light mode
    Follow system
    Dark mode
    • Play Story
    • App Story
ಪ್ರೋತ್ಸಾಹಧನ ಏರಿಕೆ ಮಾಡಲು ಸರ್ಕಾರಕ್ಕೆ ಮನವರಿಕೆ: ಐವನ್ ಡಿಸೋಜ

ಪ್ರೋತ್ಸಾಹಧನ ಏರಿಕೆ ಮಾಡಲು ಸರ್ಕಾರಕ್ಕೆ ಮನವರಿಕೆ: ಐವನ್ ಡಿಸೋಜ

ಮಂಗಳೂರು : ಸುದ್ದಿಗೋಷ್ಠಿಯಲ್ಲಿ ಪೂವಮ್ಮ ಅವರ ಬೇಸರಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಮಾದರಿಯಲ್ಲೇ ಸಮಾನ ಪ್ರಮಾಣದ ಪ್ರೋತ್ಸಾಹಧನ, ಸರ್ಕಾರಿ ಉದ್ಯೋಗ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಆಡಳಿತಾರೂಢ ಪಕ್ಷದ ಪರವಾಗಿ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪೂವಮ್ಮ ಅವರ ತಾಯಿ ಅವರ ವೀಡಿಯೊ ಹೇಳಿಕೆಯನ್ನು ನಾನು ಗಮನಿಸಿದ ತಕ್ಷಣ ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ವೀಡಿಯೊವನ್ನು ಅವರಿಗೆ ಫಾರ್ವರ್ಡ್ ಮಾಡಲಾಗಿದೆ. ಇತರ ರಾಜ್ಯಗಳು ನೀಡುವಷ್ಟೇ ಸಮಾನ ಮೊತ್ತದ ನಗದು ಬಹುಮಾನವನ್ನು ನಮ್ಮ ರಾಜ್ಯದ ಕ್ರೀಡಾಪಟುಗಳಿಗೂ ಒದಗಿಸಲು ಕ್ರೀಡಾ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: News Kannada