Dailyhunt
ಶಾಸಕ ಪ್ರೀತಮ್ ಗೌಡಗೆ ಪರೋಕ್ಷವಾಗಿ ಟಾಂಗ್ ನೀಡಿದ ಪ್ರಜ್ವಲ್ ರೇವಣ್ಣ

ಶಾಸಕ ಪ್ರೀತಮ್ ಗೌಡಗೆ ಪರೋಕ್ಷವಾಗಿ ಟಾಂಗ್ ನೀಡಿದ ಪ್ರಜ್ವಲ್ ರೇವಣ್ಣ

ಹಾಸನ :ಸಾರ್ವಜನಿಕರ ದುಡ್ಡಿನಲ್ಲಿ ನಮ್ಮ ಫೋಟೋಗಳನ್ನು ಹಾಕಿ ಬಿಂಬಿಸಿಕೊಳ್ಳುವುದು ತಪ್ಪು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಅವರು, ಸಾರ್ವಜನಿಕರ ದುಡ್ಡಿನಲ್ಲಿ ನಮ್ಮ ಫೋಟೋಗಳನ್ನು ಹಾಕಿ ಬಿಂಬಿಸಿಕೊಳ್ಳುವುದು ತಪ್ಪು.

ಯಾರೇ ಜನಪ್ರತಿನಿಧಿಯಾಗಲಿ ಕೆಲಸ ಮಾಡಿ ತೋರಿಸಬೇಕೇ ಹೊರತು ಫೋಟೋ ಹಾಕಿ ಪೋಸ್ ಕೊಡಬಾರದು ಎಂದು ಹೇಳುವ ಮೂಲಕ ಹಾಸನ ಶಾಸಕ ಪ್ರೀತಮ್ ಗೌಡ ಅವರಿಗೆ ಪ್ರಜ್ವಲ್ ರೇವಣ್ಣ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಮಾಜಿ ಸಚಿವ ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲಾದರೂ ಒಂದು ಫೋಟೋ ಹಾಕಿಕೊಂಡಿದ್ದಾರಾ ಎಂದು ಪ್ರಶ್ನಿಸಿದ ಸಂಸದ ಪ್ರಜ್ವಲ್, ಸರ್ಕಾರದ ದುಡ್ಡಿನಲ್ಲಿ ಸಾರ್ವಜನಿಕರ ಕೆಲಸ ಮಾಡುವುದನ್ನು ಸಾಧನೆ ಎನ್ನಲಾಗದು ಎಂದು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: News Kannada