Dailyhunt Logo
  • Light mode
    Follow system
    Dark mode
    • Play Story
    • App Story
ಟಾಲಿವುಡ್‌ ಸ್ಟಾರ್‌ ರಾಮ್‌ಚರಣ್‌ ʼಪೆದ್ದಿʼ ಒಟಿಟಿ ರಿಲೀಸ್‌ ದಿನಾಂಕ ಅನೌನ್ಸ್ !

ಟಾಲಿವುಡ್‌ ಸ್ಟಾರ್‌ ರಾಮ್‌ಚರಣ್‌ ʼಪೆದ್ದಿʼ ಒಟಿಟಿ ರಿಲೀಸ್‌ ದಿನಾಂಕ ಅನೌನ್ಸ್ !

ಹೈದರಾಬಾದ್:‌ ಟಾಲಿವುಡ್‌ ಸ್ಟಾರ್‌ ರಾಮ್‌ಚರಣ್‌ ಅಭಿನಯದ ಬ್ಲಾಕ್‌ಬಸ್ಟರ್‌ ʼಪೆದ್ದಿʼ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡು, ಒಟಿಟಿಗೆ ಲಗ್ಗೆಯಿಡಲು ದಿನಾಂಕ ನಿಗದಿಯಾಗಿದೆ.

ಗ್ರಾಮೀಣ ಸ್ಪೋರ್ಟ್ಸ್‌ ಡ್ರಾಮಾ ʼಪೆದ್ದಿʼ ಟಾಲಿವುಡ್‌ನಲ್ಲಿ ಇತ್ತೀಚೆಗೆ ದೊಡ್ಡ ಹಿಟ್‌ ಆದ ಸಿನಿಮಾ.

ವಿಶ್ವದಾದ್ಯಂತ ಈಗಾಗಲೇ 400 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿರುವ ಈ ಸಿನಿಮಾ, ಒಟಿಟಿ ರಿಲೀಸ್‌ ಆಗಲಿದೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್-ಇಂಡಿಯಾ ಗ್ರಾಮೀಣ ಕ್ರೀಡಾ ಆಧಾರಿತ ಅದ್ಭುತ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ.

‘ಪೆದ್ದಿ’ ಸಿನಿಮಾ 2026ರ ಜುಲೈ 9 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ಸ್ಟ್ರೀಮ್‌ ಆಗಲಿದೆ. ಹಿಂದಿ ಆವೃತ್ತಿ ಆಗಸ್ಟ್‌ ತಿಂಗಳಿನಲ್ಲಿ ಒಟಿಟಿಗೆ ಬರಲಿದೆ.

ವೃದ್ಧಿ ಸಿನಿಮಾಸ್ ಸಂಸ್ಥೆ ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ಬೊಮನ್ ಇರಾನಿ, ಶಿವರಾಜ್‌ ಕುಮಾರ್,ಬೊಮನ್ ಇರಾನಿ, ತಾರಕ್ ಪೊನ್ನಪ್ಪ, ದಿವ್ಯೆಂದು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿದ್ದು, ರತ್ನವೇಲು ಅವರ ಛಾಯಾಗ್ರಹಣವಿದೆ.

Dailyhunt
Disclaimer: This content has not been generated, created or edited by Dailyhunt. Publisher: News Kannada