Dailyhunt Logo
  • Light mode
    Follow system
    Dark mode
    • Play Story
    • App Story
ವಿಷಕಾರಿ ಪಾರಾಕ್ವಾಟ್ ಕಳೆನಾಶಕಕ್ಕೆ ಕೇಂದ್ರದಿಂದ ನಿಷೇಧ

ವಿಷಕಾರಿ ಪಾರಾಕ್ವಾಟ್ ಕಳೆನಾಶಕಕ್ಕೆ ಕೇಂದ್ರದಿಂದ ನಿಷೇಧ

ನವದೆಹಲಿ: ರೈತರು ಹಾಗೂ ಗ್ರಾಮೀಣ ಭಾಗದ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಮುನ್ನೆಲೆಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತೀವ್ರ ವಿಷಕಾರಿ ಎಂದು ಗುರುತಿಸಲಾದ 'ಪಾರಾಕ್ವಾಟ್ ಡೈಕ್ಲೋರೈಡ್' ಕಳೆನಾಶಕದ ಹೊಸ ನೋಂದಣಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಈಗಾಗಲೇ ನೀಡಲಾಗಿರುವ ನೋಂದಣಿ ಪ್ರಮಾಣಪತ್ರಗಳನ್ನು ತಕ್ಷಣದಿಂದಲೇ ರದ್ದುಗೊಳಿಸಲು ಆದೇಶಿಸಿದೆ. ಸೆಪ್ಟೆಂಬರ್ 22ರಂದು ಈ ಕುರಿತು ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಈ ಮಾರಕ ಕಳೆನಾಶಕದ ಬಳಕೆ ಹಾಗೂ ಉತ್ಪಾದನೆಗೆ ಕಡಿವಾಣ ಬಿದ್ದಂತಾಗಿದೆ.

ಮಾನವ ದೇಹ ಹಾಗೂ ಜೀವಸಂಕುಲದ ಮೇಲೆ ತೀವ್ರ ತರಹದ ದುಷ್ಪರಿಣಾಮ ಬೀರಬಲ್ಲ ಗುಣಹೊಂದಿರುವ ಈ ರಾಸಾಯನಿಕವು ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಅಪಾಯಗಳಿಗೆ ಕಾರಣವಾಗಿತ್ತು. ರೈತರ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಆರೋಗ್ಯದ ಸುರಕ್ಷತೆಗಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈ ಕಠಿಣ ಕ್ರಮ ಜರುಗಿಸಿದೆ.

ಪಾರಾಕ್ವಾಟ್ ಕೇವಲ ಕಳೆ ನಿಯಂತ್ರಣ ಔಷಧವಲ್ಲ, ಇದು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂಬ ಆತಂಕ ಹಲವು ವರ್ಷಗಳಿಂದ ವ್ಯಕ್ತವಾಗುತ್ತಿತ್ತು. ಇದಕ್ಕೆ ನಿರ್ದಿಷ್ಟ ಪ್ರತಿವಿಷ ಇಲ್ಲದಿರುವುದು ಹಾಗೂ ತೀವ್ರ ವಿಷಕಾರಿ ಗುಣ ಹೊಂದಿರುವುದರಿಂದ ಜೀವಹಾನಿಯಾಗುವ ಅಪಾಯವಿದೆ ಎಂದು ವೈದ್ಯರು, ಸಾರ್ವಜನಿಕ ಸಂಘಟನೆಗಳು ಹಾಗೂ ರೈತರು ಹಲವು ಬಾರಿ ಎಚ್ಚರಿಸಿದ್ದರು.

ಇದರ ಜೊತೆಗೆ ಮಣ್ಣು ಮತ್ತು ನೀರು ಕಲುಷಿತವಾಗುವ ಸಾಧ್ಯತೆ ಹಾಗೂ ಮಣ್ಣಿನ ಫಲವತ್ತತೆಯ ಮೇಲೂ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು

Dailyhunt
Disclaimer: This content has not been generated, created or edited by Dailyhunt. Publisher: News Kannada