ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಗ್ರಾಹಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ಸತತ ಎರಡನೇ ವಹಿವಾಟಿನಲ್ಲೂ ಚಿನ್ನದ ದರದಲ್ಲಿ ಭಾರೀ ಕುಸಿತ ದಾಖಲಾಗಿದ್ದು, ಕೇವಲ ಎರಡು ವಹಿವಾಟುಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 5,070 ರೂಪಾಯಿಯಷ್ಟು ಇಳಿಕೆಯಾಗಿದೆ.
ದೀಪಾವಳಿ ಹಬ್ಬ ಹಾಗೂ ಮುಂದಿನ ಮದುವೆ ಸೀಸನ್ ಹಿನ್ನೆಲೆಯಲ್ಲಿ ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಈ ಬೆಲೆ ಇಳಿಕೆ ದೊಡ್ಡ ನಿರಾಳತೆ ನೀಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಚಿನ್ನ ಮತ್ತು ಬೆಳ್ಳಿ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.1ಕ್ಕಿಂತ ಹೆಚ್ಚು ಹಾಗೂ ಬೆಳ್ಳಿ ಬೆಲೆ ಶೇ.2ಕ್ಕಿಂತ ಹೆಚ್ಚು ಇಳಿಕೆಯಾಗಿದೆ.
ಅಮೆರಿಕದಲ್ಲಿ ಹಣದುಬ್ಬರದ ಆತಂಕ ಮುಂದುವರಿದಿದ್ದು, ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಮೂಲ್ಯ ಲೋಹಗಳ ಮೇಲೆ ಒತ್ತಡ ಹೆಚ್ಚಾಗಿದೆ. ಮಾರುಕಟ್ಟೆ ಮಾಹಿತಿಯ ಪ್ರಕಾರ, ಅಕ್ಟೋಬರ್ 31ರ ಅಂತ್ಯಕ್ಕೆ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,38,880 ರುಪಾಯಿಗೆ ಇಳಿಕೆಯಾಗಿದ್ದು, ಹಿಂದಿನ ದರಕ್ಕೆ ಹೋಲಿಸಿದರೆ 3,380 ರೂಪಾಯಿ ಕುಸಿತ ಕಂಡಿದೆ. ಇನ್ನು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,27,300 ರುಪಾಯಿಗೆ ತಲುಪಿದ್ದು, 3,100 ರೂಪಾಯಿ ಇಳಿಕೆಯಾಗಿದೆ.
ಅದೇ ರೀತಿ 18 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 1,04,160 ರೂಪಾಯಿ ಇಳಿಕೆಯಾಗಿದ್ದು, 2,530 ರೂಪಾಯಿ ಕುಸಿತ ಕಂಡಿದೆ. 100 ಗ್ರಾಂ ಲೆಕ್ಕದಲ್ಲಿ ನೋಡಿದರೆ, 24 ಕ್ಯಾರಟ್ ಚಿನ್ನದ ಬೆಲೆ 13,88,800 ರೂಪಾಯಿ ಹಾಗೂ 22 ಕ್ಯಾರಟ್ ಚಿನ್ನದ ಬೆಲೆ 12,73,000 ರೂಪಾಯಿ ಇದೆ.
ನವೆಂಬರ್ ತಿಂಗಳ ಕೊನೆಯ ಭಾಗದಿಂದ ದೇಶದಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ಚಿನ್ನದ ದರದಲ್ಲಿ ಮುಂದುವರಿದಿರುವ ಇಳಿಕೆ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ದೀಪಾವಳಿ ಹಾಗೂ ಶುಭ ಕಾರ್ಯಗಳಿಗಾಗಿ ಚಿನ್ನ ಖರೀದಿಸಲು ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ಇಳಿಕೆಯ ಟ್ರೆಂಡ್ ಮುಂದುವರಿಯುತ್ತದೆಯೇ ಎಂಬುದನ್ನು ಮಾರುಕಟ್ಟೆ ಗಮನಿಸುತ್ತಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ:
ಬೆಂಗಳೂರು:
ಬೆಂಗಳೂರಿನಲ್ಲಿ ನವೆಂಬರ್ 1ರಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,700 ರೂಪಾಯಿ ಇದೆ.
22 ಕ್ಯಾರಟ್ ಚಿನ್ನ 1,27,142 ರೂಪಾಯಿ ಹಾಗೂ 18 ಕ್ಯಾರಟ್ ಚಿನ್ನ 1,04,025 ರೂಪಾಯಿ ಇದೆ.
ಬೆಂಗಳೂರಿನಲ್ಲಿ 999 ಶುದ್ಧತೆಯ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,79,260 ರೂಪಾಯಿ ಇದೆ.
ಮುಂಬೈ:
ಮುಂಬೈನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 1,38,590, 22 ರೂಪಾಯಿ 22 ಕ್ಯಾರಟ್ ಗೆ 1,27,041 ರೂಪಾಯಿ, ಹಾಗೂ 18 ಕ್ಯಾರಟ್ ಗೆ 1,03,943 ರೂಪಾಯಿ ಇದೆ.
ಕೋಲ್ಕತ್ತಾ:
ಕೋಲ್ಕತ್ತಾದಲ್ಲಿ 24 ಕ್ಯಾರಟ್ ಚಿನ್ನ 1,38,400 ರೂಪಾಯಿ, 22 ಕ್ಯಾರಟ್ 1,26,867 ರೂಪಾಯಿ, ಹಾಗೂ 18 ಕ್ಯಾರಟ್ 1,03,800 ರೂಪಾಯಿ ಇದೆ.
ಇಲ್ಲಿ 999 ಶುದ್ಧತೆಯ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,78,880 ರೂಪಾಯಿ ಇದೆ.
ಚೆನ್ನೈ:
ಚೆನ್ನೈನಲ್ಲಿ 24 ಕ್ಯಾರಟ್ ಚಿನ್ನ 1,38,990 ರೂಪಾಯಿ, 22 ಕ್ಯಾರಟ್ 1,27,408 ರೂಪಾಯಿ, ಹಾಗೂ 18 ಕ್ಯಾರಟ್ 1,04,243 ರೂಪಾಯಿ ಇದೆ.
ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,79,640 ರೂಪಾಯಿ ಇದೆ.
ಹೈದರಾಬಾದ್:
ಹೈದರಾಬಾದ್‌ನಲ್ಲಿ 24 ಕ್ಯಾರಟ್ ಚಿನ್ನ 1,38,810 ರೂಪಾಯಿ, 22 ಕ್ಯಾರಟ್ 1,27,243 ರೂಪಾಯಿ, ಹಾಗೂ 18 ಕ್ಯಾರಟ್ 1,04,108 ರೂಪಾಯಿ ಇದೆ.
ಇಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,79,400 ರೂಪಾಯಿ ಇದೆ.
ಅಹಮದಾಬಾದ್:
ಅಹಮದಾಬಾದ್‌ನಲ್ಲಿ 24 ಕ್ಯಾರಟ್ ಚಿನ್ನ 1,38,770 ರೂಪಾಯಿ, 22 ಕ್ಯಾರಟ್ 1,27,206 ರೂಪಾಯಿ, ಹಾಗೂ 18 ಕ್ಯಾರಟ್ 1,04,078 ರೂಪಾಯಿ ಇದೆ.
ಇಲ್ಲಿ 999 ಶುದ್ಧತೆಯ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,79,350 ರೂಪಾಯಿ ಇದೆ.
Watch on YouTube

