Dailyhunt
ಐದು ರೂಪಾಯಿ ಅಂಚೆ ಲಕೋಟೆಯ ಪತ್ರ ವಿಳಂಬ: ದೂರು ನೀಡುತ್ತಿದ್ದಂತೆಯೇ ಚುರುಕಾದ ಅಂಚೆ ಇಲಾಖೆ

ಐದು ರೂಪಾಯಿ ಅಂಚೆ ಲಕೋಟೆಯ ಪತ್ರ ವಿಳಂಬ: ದೂರು ನೀಡುತ್ತಿದ್ದಂತೆಯೇ ಚುರುಕಾದ ಅಂಚೆ ಇಲಾಖೆ

News Next 2 weeks ago

Delay of five rupee postal envelope letter As smart as the complaint the postal department

" data-image-caption="

Image credits to original source

" data-medium-file="https://kannada.newsnext.live/wp-content/uploads/2026/04/Delay-of-five-rupee-postal-envelope-letter-As-smart-as-the-complaint-the-postal-department.jpg" data-large-file="https://kannada.newsnext.live/wp-content/uploads/2026/04/Delay-of-five-rupee-postal-envelope-letter-As-smart-as-the-complaint-the-postal-department.jpg" />

ಉಡುಪಿ : ಸುಮಾರು ಒಂದು ರಿಂದ ಒಂದೂವರೆ ವರ್ಷದ ಅವಧಿಯಲ್ಲಿ ಪರ್ಕಳ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯ ಸೇವೆಯಲ್ಲಿ ವಿಳಂಬ ಹಾಗೂ ಅವ್ಯವಸ್ಥೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ.

ದೇವಸ್ಥಾನ, ದೈವಸ್ಥಾನ, ಮೂಲಸ್ಥಾನ ಹಾಗೂ ವಿವಿಧ ಇಲಾಖೆಗಳ ವಾರ್ಷಿಕ ಇನ್ಶೂರೆನ್ಸ್ ಡ್ಯೂ ನೋಟಿಸ್‌ಗಳು ಸೇರಿದಂತೆ ಪ್ರಮುಖ ಪತ್ರಗಳು ಸಂಬಂಧಪಟ್ಟವರ ಕೈ ಸೇರದೇ ಕಾಣೆಯಾಗುತ್ತಿದ್ದ ಘಟನೆಗಳು ನಡೆದಿದ್ದವು.

ಈ ಕುರಿತು ಪರ್ಕಳದ ಶ್ರೀಮತಿ ಜ್ಯೋತಿ ಗಣೇಶ್ ರಾಜ್ ಅವರು ಮಾರ್ಚ್ 23ರಂದು ಸ್ಥಳೀಯ ಅಂಚೆ ಕಚೇರಿಗೆ ಲಿಖಿತ ದೂರು ಸಲ್ಲಿಸಿದರು. ದೂರು ನೀಡಿದ ಕೆಲವೇ ದಿನಗಳಲ್ಲಿ, ಏಪ್ರಿಲ್ 1ರಂದು, ದೇವಸ್ಥಾನದ ಪತ್ರಗಳು ಹಾಗೂ ಪ್ರಸಾದಗಳು ಅವರ ಮನೆಗೆ ತಲುಪಿದವು.

ವಿಶೇಷವೆಂದರೆ, ಅಧಿಕಾರಿಗಳು ದೂರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ವಿಳಂಬಗೊಂಡಿದ್ದ ಪತ್ರ ಅವರ ಸಮ್ಮುಖದಲ್ಲಿ ದೊರೆತಿದೆ. ಪರಿಶೀಲನೆಯ ವೇಳೆ ಆ ಪತ್ರದ ದಿನಾಂಕ ಹಾಗೂ ವಿಳಾಸವನ್ನು ಗಮನಿಸಿದ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯವೈಖರಿಯಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.

ಬೆಣ್ಣೆ ಕುದ್ರು ನಿಂದ ಪರ್ಕಳದ ಅಚ್ಯುತ ನಗರಕ್ಕೆ ಕಳುಹಿಸಲಾದ ಐದು ರೂಪಾಯಿ ಅಂಚೆ ಲಕೋಟೆಯ ಈ ಪತ್ರ ತಲುಪಲು ಸುಮಾರು ಒಂದು ತಿಂಗಳು ಒಂಬತ್ತು ದಿನಗಳ ಕಾಲ ತೆಗೆದುಕೊಂಡಿರುವುದು ಗಮನಾರ್ಹವಾಗಿದೆ. ಈ ರೀತಿಯ ಅಂಚೆ ಸೇವೆಯ ವಿಳಂಬದಿಂದ ಸ್ಥಳೀಯರು ಅಸಮಾಧಾನಗೊಂಡಿದ್ದು, ಹಲವರು ಈಗಾಗಲೇ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ದೂರು ಸಲ್ಲಿಸಿದ ಬಳಿಕ ಮಾತ್ರ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದೆ.

Delay of five rupee postal envelope letter As smart as the complaint the postal department

Dailyhunt
Disclaimer: This content has not been generated, created or edited by Dailyhunt. Publisher: News Next