Dailyhunt Logo
  • Light mode
    Follow system
    Dark mode
    • Play Story
    • App Story
ಬೆಳಗಿನ ಉಪಹಾರಕ್ಕೆ ಆರೋಗ್ಯಕರ 'ಸ್ಟಫ್ಡ್ ಪಾಲಕ್ ಇಡ್ಲಿ': ಇಲ್ಲಿದೆ ಸುಲಭ ರೆಸಿಪಿ.

ಬೆಳಗಿನ ಉಪಹಾರಕ್ಕೆ ಆರೋಗ್ಯಕರ 'ಸ್ಟಫ್ಡ್ ಪಾಲಕ್ ಇಡ್ಲಿ': ಇಲ್ಲಿದೆ ಸುಲಭ ರೆಸಿಪಿ.

News Next 2 weeks ago

ಬೆಳಿಗ್ಗೆ ಎದ್ದ ತಕ್ಷಣ 'ಇವತ್ತು ತಿಂಡಿಗೆ ಏನು ಮಾಡುವುದು?' ಎಂಬ ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿಗೆ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲು. ಈ ಎಲ್ಲಾ ಚಿಂತೆಗಳಿಗೆ ಇಲ್ಲಿದೆ ಒಂದು ಸೂಪರ್ ಪರಿಹಾರ!

ನಿಮ್ಮ ದೈನಂದಿನ ಇಡ್ಲಿಗೆ ಕೊಂಚ ಡಿಫರೆಂಟ್ ಟ್ವಿಸ್ಟ್ ನೀಡಿ, ಪಾಲಕ್ ಸೊಪ್ಪು ಮತ್ತು ಆಲೂಗಡ್ಡೆ ಮಸಾಲೆಯನ್ನು ಬಳಸಿ ಆರೋಗ್ಯಕರ ಹಾಗೂ ರುಚಿಕರವಾದ 'ಸ್ಟಫ್ಡ್ ಪಾಲಕ್ ಇಡ್ಲಿ' ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:

ಇಡ್ಲಿ ಹಿಟ್ಟಿಗೆ:

  • ಇಡ್ಲಿ ಹಿಟ್ಟು
  • ಪಾಲಕ್ ಸೊಪ್ಪು
  • ಹಸಿರು ಮೆಣಸಿನಕಾಯಿ
  • ಶುಂಠಿ
  • ಉಪ್ಪು (ರುಚಿಗೆ ತಕ್ಕಷ್ಟು)

ಮಸಾಲಾ ಸ್ಟಫಿಂಗ್‌ಗೆ:

  • ಬೇಯಿಸಿದ ಆಲೂಗಡ್ಡೆ
  • ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
  • ಸಾಸಿವೆ & ಜೀರಿಗೆ
  • ಅರಿಶಿನ ಪುಡಿ
  • ಗರಂ ಮಸಾಲಾ
  • ಕೊತ್ತಂಬರಿ ಸೊಪ್ಪು
  • ಎಣ್ಣೆ ಮತ್ತು ಉಪ್ಪು

ಮಾಡುವ ಸರಳ ವಿಧಾನ:

ಹಂತ 1: ಹಸಿರು ಇಡ್ಲಿ ಹಿಟ್ಟು ಸಿದ್ಧಪಡಿಸುವುದು

  1. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ, ಅದರಲ್ಲಿ ತೊಳೆದ ಪಾಲಕ್ ಸೊಪ್ಪನ್ನು ಕೇವಲ 2 ನಿಮಿಷಗಳ ಕಾಲ ಬೇಯಿಸಿ (ಬ್ಲಾಂಚ್ ಮಾಡಿ) ನಂತರ ತಣ್ಣಗಾಗಲು ಬಿಡಿ.
  2. ಈಗ ಮಿಕ್ಸಿ ಜಾರ್‌ಗೆ ಬೆಂದ ಪಾಲಕ್ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
  3. ಈ ಪಾಲಕ್ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.

ಹಂತ 2: ಆಲೂಗಡ್ಡೆ ಮಸಾಲೆ ಸಿದ್ಧಪಡಿಸುವುದು

  1. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕೈಯಾಡಿಸಿ.
  3. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಕೆಳಗಿಳಿಸಿ. ಮಿಶ್ರಣ ತಣ್ಣಗಾದ ಮೇಲೆ, ಸಣ್ಣ ಸಣ್ಣ ಚಪ್ಪಟೆಯಾದ (ಟಿಕ್ಕಿ ಆಕಾರದ) ಉಂಡೆಗಳನ್ನು ಮಾಡಿಟ್ಟುಕೊಳ್ಳಿ.

ಹಂತ 3: ಸ್ಟಫ್ಡ್ ಇಡ್ಲಿ ಬೇಯಿಸುವುದು

  1. ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಮೊದಲು 1 ಚಮಚ ಸಿದ್ಧಪಡಿಸಿದ ಪಾಲಕ್ ಇಡ್ಲಿ ಹಿಟ್ಟನ್ನು ಹಾಕಿ.
  2. ಅದರ ಮಧ್ಯದಲ್ಲಿ ನಾವು ರೆಡಿ ಮಾಡಿಟ್ಟುಕೊಂಡ ಆಲೂಗಡ್ಡೆ ತಟ್ಟೆಯನ್ನು (ಮಸಾಲೆ) ಇಡಿ.
  3. ಈಗ ಆ ಆಲೂಗಡ್ಡೆ ಮಸಾಲೆಯ ಮೇಲೆ ಮತ್ತೊಂದು ಚಮಚ ಇಡ್ಲಿ ಹಿಟ್ಟನ್ನು ಹಾಕಿ, ಮಸಾಲೆ ಸಂಪೂರ್ಣವಾಗಿ ಮುಚ್ಚುವಂತೆ ಕವರ್ ಮಾಡಿ.
  4. ಕೊನೆಯದಾಗಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಸುಮಾರು 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಚೆನ್ನಾಗಿ ಬೇಯಿಸಿ.

ಸೇವಿಸುವ ವಿಧಾನ: ಈಗ ಬಿಸಿಬಿಸಿಯಾದ, ಸಾಫ್ಟ್ ಆದ ಸ್ಟಫ್ಡ್ ಪಾಲಕ್ ಇಡ್ಲಿ ಸಿದ್ಧ! ಇದನ್ನು ಕಾಯಿ ಚಟ್ನಿ ಅಥವಾ ಬಿಸಿ ಸಾಂಬಾರ್ ಜೊತೆ ಸವಿಯಲು ಅದ್ಭುತವಾಗಿರುತ್ತದೆ. ಮಕ್ಕಳ ಲಂಚ್ ಬಾಕ್ಸ್‌ಗೂ ಇದು ಬೆಸ್ಟ್ ಆಪ್ಷನ್.

Dailyhunt
Disclaimer: This content has not been generated, created or edited by Dailyhunt. Publisher: News Next