Dailyhunt Logo
  • Light mode
    Follow system
    Dark mode
    • Play Story
    • App Story
"ಬ್ಯಾಟ್‌ನಲ್ಲಿ ಚಿಪ್‌ ಇದೆ ಅಂದವರಿಗೆ ಬ್ಯಾಟ್‌ನಲ್ಲೇ ಉತ್ತರ ಕೊಟ್ಟ ವೈಭವ್​ ಸೂರ್ಯವಂಶಿ !

"ಬ್ಯಾಟ್‌ನಲ್ಲಿ ಚಿಪ್‌ ಇದೆ ಅಂದವರಿಗೆ ಬ್ಯಾಟ್‌ನಲ್ಲೇ ಉತ್ತರ ಕೊಟ್ಟ ವೈಭವ್​ ಸೂರ್ಯವಂಶಿ !

News Next 2 weeks ago

ಯುವ ಆಟಗಾರ ವೈಭವ್​ ಸೂರ್ಯವಂಶಿ ತಮ್ಮ ಬ್ಯಾಟಿಂಗ್​ ಅಬ್ಬರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಪರವಾಗಿ ಅಬ್ಬರದ ಪ್ರದರ್ಶನ ತೋರುತ್ತಿರುವ ವೈಭವ್​ ಸೂರ್ಯವಂಶಿ ಬೌಲರ್​ಗಳ ಬೆಂಡೆತ್ತುವ ಸಣ್ಣ ಅವಕಾಶವನ್ನೂ ಬಿಡುತ್ತಿಲ್ಲ.

ಆದರೆ ಈ ಎಲ್ಲದರ ನಡುವೆ ಪಾಕ್​ನ ಕ್ರಿಕೇಟ್​ ವಿಶ್ಲೇಷಕನೊಬ್ಬ ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ಅಬ್ಬರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ವೈಭವ್​ ಸೂರ್ಯವಂಶಿ ತಮ್ಮ ಸ್ವಂತ ಬಲದಿಂದ ಕ್ರಿಕೇಟ್​ ಲೋಕದಲ್ಲಿ ಅಮೋಘ ಪ್ರದರ್ಶನ ನೀಡುತ್ತಿಲ್ಲ. ಬದಲಾಗಿ ಅವರ ಬ್ಯಾಟ್​ನಲ್ಲಿ ಎಐ ಚಿಪ್​ ಇದೆ ಎಂದು ಪಾಕಿಸ್ತಾನದ ಕ್ರಿಕೆಟ್​ ವಿಶ್ಲೇಷಕ ನೌಮನ್​ ಗಂಭೀರ ಆರೋಪ ಮಾಡಿದ್ದರು. ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನೌಮನ್​, ಕ್ರಿಕೆಟ್​ ಆಟಗಾರರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸುವಂತೆ ವೈಭವ್​ ಸೂರ್ಯವಂಶಿಯ ಬ್ಯಾಟ್​ನ್ನೂ ಪರೀಕ್ಷೆಗೆ ಒಳಪಡಿಸಬೇಕು. ಏಕೆಂದರೆ ಅವರ ಬ್ಯಾಟ್​ನಲ್ಲಿ ಕೃತಕ ಬುದ್ಧಿಮತ್ತೆಯ ಚಿಪ್​ ಇದೆ ಎಂಬ ಅನುಮಾನ ನನಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ರಾಷ್ಟ್ರೀಯ ಮಟ್ಟದ ಸ್ಪೀಡ್​ ಸ್ಕೇಟಿಂಗ್​ ಚಾಂಪಿಯನ್​ಶಿಪ್​ : ಬ್ರಹ್ಮಾವರದ ಅದ್ವಿತ​ ಗುರುಪ್ರಸಾದ್​ ಶೆಟ್ಟಿಗಾರ್ ಗೆ ಚಿನ್ನದ ಪದಕ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ವೈಭವ್​ ಸೂರ್ಯವಂಶಿ, ಪಾಕ್​ ಕ್ರಿಕೇಟ್​ ವಿಶ್ಲೇಷಕನ ಆರೋಪಗಳಿಗೆ ಖಡಕ್​ ತಿರುಗೇಟು ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್​ ತಂಡದ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೈಭವ್​ ಸೂರ್ಯವಂಶಿ ತಮ್ಮ ಬ್ಯಾಟ್​ನಲ್ಲಿ ಎಐ ಚಿಪ್​ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಚಿಪ್​ನ್ನು ಸ್ವತಃ ಆ ದೇವರೇ ನನ್ನ ಬ್ಯಾಟ್​ನಲ್ಲಿ ಇರಿಸಿದ್ದಾರೆ ಎಂದು ಹೇಳುವ ಮೂಲಕ ಪಾಕ್​​ ಕ್ರಿಕೆಟ್​ ವಿಶ್ಲೇಷಕನ ಬಾಯಿ ಮುಚ್ಚಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: News Next