ಕೇಂದ್ರ ಸರ್ಕಾರ ದೇಶಾದ್ಯಂತ LPG ಗ್ರಾಹಕರಿಗೆ ಆಧಾರ್ ಆಧಾರಿತ eKYC ಪೂರ್ಣಗೊಳಿಸುವಂತೆ ಸೂಚನೆ ನೀಡಿರುವ ಬೆನ್ನಲ್ಲೇ, ವಿದೇಶದಲ್ಲಿರುವ HP Gas ಗ್ರಾಹಕರಿಗೆ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (Hindustan Petroleum Corporation Limited) ಮಹತ್ವದ ಮಾಹಿತಿ ನೀಡಿದೆ.
HP PAY ಮೂಲಕ ವಿದೇಶದಿಂದ eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು HPCL ಸ್ಪಷ್ಟಪಡಿಸಿದೆ.
ಆದರೆ, ಇದರಿಂದ ವಿದೇಶದಲ್ಲಿರುವ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಅವರು ಭಾರತದಲ್ಲಿರುವ ತಮ್ಮ ಕುಟುಂಬದ ಸದಸ್ಯರು ಅಥವಾ ಸಂಪರ್ಕವನ್ನು ಬಳಸುತ್ತಿರುವ ಅರ್ಹ ವ್ಯಕ್ತಿಯ ಹೆಸರಿಗೆ LPG ಸಂಪರ್ಕವನ್ನು ನಿಗದಿತ ನಿಯಮಗಳ ಪ್ರಕಾರ ವರ್ಗಾಯಿಸಿಕೊಳ್ಳಬಹುದು ಎಂದು HPCL ತಿಳಿಸಿದೆ.
ವಿದೇಶದಲ್ಲಿರುವಗ್ರಾಹಕರಿಗೆಇರುವಎರಡುಪ್ರಮುಖಆಯ್ಕೆಗಳು:
1. ಕುಟುಂಬದವರುಸಂಪರ್ಕಬಳಸುತ್ತಿದ್ದರೆ:
LPG ಸಂಪರ್ಕದ ಮೂಲ ಗ್ರಾಹಕರು ವಿದೇಶದಲ್ಲಿದ್ದು, ಅವರ ಕುಟುಂಬದ ಸದಸ್ಯರು ಆ ಸಂಪರ್ಕವನ್ನು ಬಳಸುತ್ತಿದ್ದರೆ, HPCL ನ ನಿಗದಿತ ಕಾರ್ಯವಿಧಾನದ (SOP) ಪ್ರಕಾರ ಹೆಸರು ಬದಲಾವಣೆ (Name Change) ಮಾಡಿ ಕಾನೂನುಬದ್ಧ ಉತ್ತರಾಧಿಕಾರಿ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಸಂಪರ್ಕವನ್ನು ವರ್ಗಾಯಿಸಬಹುದು.
2. ಕುಟುಂಬದವರಲ್ಲದವರುಸಂಪರ್ಕಬಳಸುತ್ತಿದ್ದರೆ:
ವಿದೇಶದಲ್ಲಿರುವ ಗ್ರಾಹಕರ LPG ಸಂಪರ್ಕವನ್ನು ಕುಟುಂಬದವರಲ್ಲದ ವ್ಯಕ್ತಿಯೊಬ್ಬರು ಬಳಸುತ್ತಿದ್ದರೆ, ಅನ್ವಯವಾಗುವ ನಿಯಮಗಳ ಪ್ರಕಾರ ಆ ವ್ಯಕ್ತಿಯ ಹೆಸರಿಗೂ ಸಂಪರ್ಕವನ್ನು ವರ್ಗಾಯಿಸಬಹುದಾಗಿದೆ.
ಯಾವಸಂದರ್ಭಗಳಲ್ಲಿ LPG ಸಂಪರ್ಕದಹೆಸರುಬದಲಾಯಿಸಬಹುದು?
HPCL ಮಾರ್ಗಸೂಚಿಗಳ ಪ್ರಕಾರ ಈ ಕೆಳಗಿನ ಐದು ಸಂದರ್ಭಗಳಲ್ಲಿ LPG ಸಂಪರ್ಕದ ಹೆಸರನ್ನು ಬದಲಾಯಿಸಲು ಅವಕಾಶವಿದೆ.
ಗ್ರಾಹಕರಮರಣವಾದಲ್ಲಿ:
ಗ್ರಾಹಕರ ಮರಣದ ನಂತರ ಕಾನೂನುಬದ್ಧ ಉತ್ತರಾಧಿಕಾರಿ ಅಥವಾ ಕುಟುಂಬದ ಸದಸ್ಯರ ಹೆಸರಿಗೆ ಸಂಪರ್ಕವನ್ನು ವರ್ಗಾಯಿಸಬಹುದು. ಇದಕ್ಕಾಗಿ ಈ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಜಿ
ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರ (Legal Heir Certificate)
ಇತರ ಉತ್ತರಾಧಿಕಾರಿಗಳ ನಿರಾಕ್ಷೇಪಣಾ ಪತ್ರ (NOC)
ಮರಣ ಪ್ರಮಾಣಪತ್ರ
KYC ಫಾರ್ಮ್
ಗುರುತಿನ ಹಾಗೂ ವಿಳಾಸದ ಪುರಾವೆ
ಮೂಲ Subscription Voucher (SV)
ಒಂದು ವೇಳೆ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ (Legal Heir Certificate) ಲಭ್ಯವಿಲ್ಲದಿದ್ದರೆ, HPCL ಸೂಚಿಸಿರುವ ನಮೂನೆಯಲ್ಲಿ ಘೋಷಣಾ ಪತ್ರ ಸಲ್ಲಿಸಲು ಅವಕಾಶವಿದೆ.
ಗಮನಿಸಿ: ಭದ್ರತಾ ಠೇವಣಿ (Security Deposit) ಹಿಂದಿನಂತೆಯೇ ಮುಂದುವರಿಯುತ್ತದೆ. ಹೊಸ ಫಲಾನುಭವಿಯ ಹೆಸರಿಗೆ ವರ್ಗಾವಣೆ ಪತ್ರ (Transfer Voucher (TV) ಹಾಗೂ ಹೊಸ ಸಂಪರ್ಕ ನೋಂದಣಿ ವೋಚರ್ (SV) ನೀಡಲಾಗುತ್ತದೆ.
ಮದುವೆಯಾದಬಳಿಕ:
ಮದುವೆಯಾದ ನಂತರ LPG ಸಂಪರ್ಕದ ಹೆಸರನ್ನು ಬದಲಾಯಿಸಬಹುದು.
ಬೇಕಾಗುವದಾಖಲೆಗಳು:
ಅರ್ಜಿ
ವಿವಾಹ ಪ್ರಮಾಣಪತ್ರ
ಮೂಲ ಸಂಪರ್ಕ ನೋಂದಣಿ ವೋಚರ್ (Subscription Voucher (SV)
SV ಕಳೆದುಹೋಗಿದ್ದರೆ ಅಫಿಡವಿಟ್
ಈ ಸಂದರ್ಭದಲ್ಲಿಯೂ ಭದ್ರತಾ ಠೇವಣಿ ಹಿಂದಿನಂತೆಯೇ ಮುಂದುವರಿಯುತ್ತದೆ.
ಗ್ರಾಹಕರುಜೀವಂತವಾಗಿರುವಾಗಕುಟುಂಬದೊಳಗಿನವರ್ಗಾವಣೆ:
ಗ್ರಾಹಕರು ಜೀವಂತವಾಗಿದ್ದರೂ ಕೆಳಗಿನ ಕುಟುಂಬ ಸದಸ್ಯರಿಗೆ LPG ಸಂಪರ್ಕವನ್ನು ವರ್ಗಾಯಿಸಬಹುದು.
ತಂದೆ
ತಾಯಿ
ಸಹೋದರ
ಸಹೋದರಿ
ಮಗ
ಮಗಳು
ಪತಿ ಅಥವಾ ಪತ್ನಿ
ಬೇಕಾಗುವ ದಾಖಲೆಗಳು:
ಮೂಲ ಗ್ರಾಹಕರ ಲಿಖಿತ ಒಪ್ಪಿಗೆ
ಹೊಸ ಫಲಾನುಭವಿಯ Declaration
KYC ಫಾರ್ಮ್
ಗುರುತಿನ ಹಾಗೂ ವಿಳಾಸದ ಪುರಾವೆ
ಮೂಲ SV ಅಥವಾ SV ಕಳೆದುಹೋಗಿದ್ದರೆ Affidavit
ಇದಾದ ಬಳಿಕ ಹೊಸ ಫಲಾನುಭವಿಯ ಹೆಸರಿಗೆ ವರ್ಗಾವಣೆ ವೋಚರ್ (Transfer Voucher - TV) ಹಾಗೂ ಹೊಸ ಸಂಪರ್ಕ ನೋಂದಣಿ ವೋಚರ್ (Subscription Voucher - SV) ನೀಡಲಾಗುತ್ತದೆ."4. ಸಿಲಿಂಡರ್, ರೆಗ್ಯುಲೇಟರ್ ಹಾಗೂ SV ಹೊಂದಿರುವ ವ್ಯಕ್ತಿ
ಯಾರ ಬಳಿ ಎಲ್‌ಪಿಜಿ ಸಿಲಿಂಡರ್, ಗೃಹ ಬಳಕೆಯ ಒತ್ತಡ ನಿಯಂತ್ರಕ (Domestic Pressure Regulator - DPR) ಮತ್ತು ಸಂಪರ್ಕ ನೋಂದಣಿ ವೋಚರ್ (Subscription Voucher - SV) ಇದ್ದರೂ ಸಂಪರ್ಕ ಅವರ ಹೆಸರಿನಲ್ಲಿ ಇಲ್ಲದಿದ್ದರೆ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆ ಸಂಪರ್ಕವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು."
ಅಗತ್ಯದಾಖಲೆಗಳು:
ಮೂಲ ಗ್ರಾಹಕರ ಒಪ್ಪಿಗೆ ಪತ್ರ (Consent Letter)
ನಷ್ಟ ಪರಿಹಾರ ಭರವಸೆ ಘೋಷಣಾಪತ್ರ (Indemnity Declaration)
KYC ಫಾರ್ಮ್
ಗರುತಿನ ಮತ್ತು ವಿಳಾಸದ ದಾಖಲೆ
ಮೂಲ SV ಅಥವಾ ಅಫಿಡವಿಟ್
ಈ ಸಂದರ್ಭದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಭದ್ರತಾ ಠೇವಣಿ ದರದ ಪ್ರಕಾರ ವ್ಯತ್ಯಾಸದ ಮೊತ್ತವನ್ನು ಪಾವತಿಸಿದ ಬಳಿಕ ಹೊಸ SV ನೀಡಲಾಗುತ್ತದೆ.
ಮೂಲಗ್ರಾಹಕರಒಪ್ಪಿಗೆಪತ್ರನೀಡಲುಸಾಧ್ಯವಾಗದಿದ್ದರೆ?
ಮೂಲ ಗ್ರಾಹಕರ ಒಪ್ಪಿಗೆ ಪತ್ರ ಪಡೆಯಲು ಸಾಧ್ಯವಾಗದಿದ್ದರೆ, HPCL ಸೂಚಿಸಿರುವ Annexure-C ಪ್ರಕಾರ ನಷ್ಟ ಪರಿಹಾರ ಭರವಸೆ ಘೋಷಣಾಪತ್ರ (Indemnity Declaration) ಸಲ್ಲಿಸಿ ಸಂಪರ್ಕವನ್ನು ಕ್ರಮಬದ್ಧಗೊಳಿಸಬಹುದು.
ಯಾವುದೇ ದಾಖಲೆಗಳಿಲ್ಲದೆ LPG ಉಪಕರಣ ಹೊಂದಿರುವವರು:
ಸಿಲಿಂಡರ್ ಮತ್ತು ರೆಗ್ಯುಲೇಟರ್ ಇದ್ದರೂ SV ಅಥವಾ DGCC ಸೇರಿದಂತೆ ಯಾವುದೇ ದಾಖಲೆಗಳಿಲ್ಲದಿದ್ದರೆ ಸಹ ಸಂಪರ್ಕವನ್ನು ಕಾನೂನುಬದ್ಧವಾಗಿ ಪಡೆಯಬಹುದು.
ಅಗತ್ಯ ದಾಖಲೆಗಳು:
ಅನುಬಂಧ-ಇ ಘೋಷಣಾ ಪತ್ರ (Annexure-E Declaration)
KYC ಫಾರ್ಮ್
ಗುರುತಿನ ಹಾಗೂ ವಿಳಾಸದ ದಾಖಲೆ
ಪ್ರಸ್ತುತ ಭದ್ರತಾ ಠೇವಣಿ
ಇವುಗಳನ್ನು ಸಲ್ಲಿಸಿದ ಬಳಿಕ ಹೊಸ ಸಂಪರ್ಕ ನೋಂದಣಿ ವೋಚರ್ ನೀಡಲಾಗುತ್ತದೆ.
HPCL ಗ್ರಾಹಕರಿಗೆಪ್ರಮುಖಸೂಚನೆ HPCL ಸ್ಪಷ್ಟಪಡಿಸಿರುವಂತೆ:
ವಿದೇಶದಿಂದ HP PAY ಮೂಲಕ eKYC ಮಾಡಲು ಸಾಧ್ಯವಿಲ್ಲ.
ವಿದೇಶದಲ್ಲಿರುವ ಗ್ರಾಹಕರು ತಮ್ಮ LPG ಸಂಪರ್ಕವನ್ನು ಕುಟುಂಬದವರು ಅಥವಾ ಅರ್ಹ ವ್ಯಕ್ತಿಯ ಹೆಸರಿಗೆ ವರ್ಗಾಯಿಸಬಹುದು.
ಪ್ರತಿ ಸಂದರ್ಭಕ್ಕೂ ಅಗತ್ಯ ದಾಖಲೆಗಳನ್ನು ಸಂಬಂಧಿತ HP Gas ವಿತರಕರಿಗೆ ಸಲ್ಲಿಸಬೇಕು.
ಅರ್ಜಿ ಅನುಮೋದನೆಯಾದ ಬಳಿಕ ಹೊಸ ಸಂಪರ್ಕ ನೋಂದಣಿ ವೋಚರ್ ಮತ್ತು ವರ್ಗಾವಣೆ ವೋಚರ್ ನೀಡಲಾಗುತ್ತದೆ.
LPG ಸಬ್ಸಿಡಿ ಹಾಗೂ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದಾ ನವೀಕರಿಸಿಟ್ಟುಕೊಳ್ಳುವುದು ಅಗತ್ಯ.

