Dailyhunt Logo
  • Light mode
    Follow system
    Dark mode
    • Play Story
    • App Story
ಇಂಡಿಯಾ ಪೋಸ್ಟ್‌ ನೇಮಕಾತಿ : 24,000 ಕ್ಕೂ ಹೆಚ್ಚು ಜಿಡಿಎಸ್‌ ಹುದ್ದೆಗಳಿಗೆ ಈ ದಿನದಿಂದ ಅರ್ಜಿ ಸಲ್ಲಿಕೆ ಪ್ರಾರಂಭ!

ಇಂಡಿಯಾ ಪೋಸ್ಟ್‌ ನೇಮಕಾತಿ : 24,000 ಕ್ಕೂ ಹೆಚ್ಚು ಜಿಡಿಎಸ್‌ ಹುದ್ದೆಗಳಿಗೆ ಈ ದಿನದಿಂದ ಅರ್ಜಿ ಸಲ್ಲಿಕೆ ಪ್ರಾರಂಭ!

News Next 2 weeks ago

ತ್ತನೇ ತರಗತಿ ಪಾಸಾಗಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ ನ್ಯೂಸ್‌. ಇಂಡಿಯಾ ಪೋಸ್ಟ್‌ (India Post) ಗ್ರಾಮೀಣ ಡಾಕ್‌ ಸೇವಕ್‌ (GDS) ನೇಮಕಾಗಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಗ್ರಾಮೀಣ ಅಂಚೆ ಸೇವಕ (GDS) ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಆಗಸ್ಟ್‌ 31ರಿಂದ ಪ್ರಾರಂಭವಾಗಲಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್‌ 19 ರವರೆಗೆ ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್‌ 23 ರ ರಿಂದ ಸೆಪ್ಟೆಂಬರ್‌ 24 ರ ನಡುವೆ ಫಾರ್ಮ್‌ ತಿದ್ದುಪಡಿಗೆ ಅವಕಾಶವನ್ನೂ ನೀಡಿದೆ. ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳಿರುವುದು ಮುಖ್ಯವಾಗಿದೆ.

ವಯೋಮಿತಿ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 40 ವರ್ಷಗಳ ಒಳಗೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ 10 ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ನೋಂದಣಿ ಶುಲ್ಕ ಪಾವತಿಸಬೇಕು. ಮೀಸಲಾತಿ ಇಲ್ಲದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಜಿಡಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಮುಖಪುಟದಲ್ಲಿರುವ ಆನ್‌ಲೈನ್‌ ನೋಂದಣಿ ವಿಭಾಗಕ್ಕೆ ಹೋಗಿ.

  • ಅಲ್ಲಿ ಕೇಳಿರುವ ಅಗತ್ಯ ವಿವರಗಳನ್ನು ನಮೂದಿಸಿ.

  • ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಅದರ ಪ್ರತಿಯನ್ನು ಅಪ್‌ಲೋಡ್‌ ಮಾಡಿ, ನೋಂದಣಿ ಶುಲ್ಕ (ನಿಮಗೆ ಅನ್ವಯಿಸುತ್ತಿದ್ದರೆ ಮಾತ್ರ) ಪಾವತಿಸಿ.

  • ಕೊನೆಯಲ್ಲಿ ಇನ್ನೊಮ್ಮೆ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ಸಲ್ಲಿಸಿ.

  • ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್ ತೆಗೆದುಕೊಳ್ಳಿ.

Watch on YouTube

Dailyhunt
Disclaimer: This content has not been generated, created or edited by Dailyhunt. Publisher: News Next