Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರಿಗೆ ಮೈಸೂರು ರೈಲ್ವೆ ವಲಯವೇ ಬೇಕು: ಕೇರಳದ ಕುತಂತ್ರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ

ಮಂಗಳೂರಿಗೆ ಮೈಸೂರು ರೈಲ್ವೆ ವಲಯವೇ ಬೇಕು: ಕೇರಳದ ಕುತಂತ್ರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ

News Next 1 week ago

ರಾವಳಿ ಕನ್ನಡಿಗರ ಮೂರು ದಶಕಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ದೊಡ್ಡ ಜಯ ಸಿಕ್ಕಿದ್ದು,. ಮಂಗಳೂರು ರೈಲ್ವೆ ಜಾಲವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ಮುಕ್ತಗೊಳಿಸಿ, ಕರ್ನಾಟಕದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ರೈಲ್ವೆ ಮಂಡಳಿಯು ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ತಿಳಿದಿರುವ ವಿಚಾರ.

ಈ ಮಹತ್ವದ ಆಡಳಿತಾತ್ಮಕ ಬದಲಾವಣೆಯು ಮುಂಬರುವ ಅಕ್ಟೋಬರ್ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಮಂಗಳೂರು ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಜಾಲವು ಇಷ್ಟು ದಿನ ಕೇರಳದ ದಕ್ಷಿಣ ರೈಲ್ವೆ ವಲಯದ ಆಧೀನದಲ್ಲಿದ್ದಿದ್ದರಿಂದ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿತ್ತು.

ಸ್ಥಳೀಯ ಉದ್ಯೋಗಾವಕಾಶಗಳು ಹಾಗೂ ಹೊಸ ರೈಲುಗಳ ಸೌಲಭ್ಯದಿಂದ ಕರ್ನಾಟಕ ವಂಚಿತವಾಗಿತ್ತು. ಈಗ ಕೇಂದ್ರದ ಈ ಐತಿಹಾಸಿಕ ತೀರ್ಮಾನದಿಂದಾಗಿ ಕರಾವಳಿ ಮತ್ತು ಮಲೆನಾಡು ಭಾಗದ ರೈಲ್ವೆ ಸಂಪರ್ಕಕ್ಕೆ ಹೊಸ ವೇಗ ಸಿಗಲಿದ್ದು, ಪ್ರಯಾಣಿಕರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಆದರೆ, ಈ ಪ್ರಕ್ರಿಯೆಗೆ ನೆರೆರಾಜ್ಯ ಕೇರಳದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮಗೆ ಆಗಲಿರುವ ಭಾರಿ ಆದಾಯ ನಷ್ಟವನ್ನು ತಡೆಯಲು ಕೇರಳದ ರಾಜಕಾರಣಿಗಳು ದೆಹಲಿ ಮಟ್ಟದಲ್ಲಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಮಾತ್ರ ಪಾಲಕ್ಕಾಡ್ ವಲಯದಲ್ಲೇ ಉಳಿಸಿಕೊಳ್ಳುವ ರಾಜಕೀಯ ತಂತ್ರಗಾರಿಕೆಯೂ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಕರಾವಳಿಯ ಸಾರ್ವಜನಿಕರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಕೇರಳದ ಒತ್ತಡಕ್ಕೆ ಮಣಿಯಬಾರದು ಮತ್ತು ಸಂಪೂರ್ಣ ಮಂಗಳೂರು ರೈಲ್ವೆ ಜಾಲವನ್ನು ಕರ್ನಾಟಕದ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಸಿಕ್ಕಿರುವ ಈ ನ್ಯಾಯಯುತ ಹಕ್ಕನ್ನು ಕಳೆದುಕೊಳ್ಳದಂತೆ ಕರಾವಳಿ ಜನತೆಯಲ್ಲಿ ಜಾಗೃತಿಯ ಅಲೆ ಎದ್ದಿದೆ.ಒಂದು ವೇಳೆ ಕೇರಳದ ಕುತಂತ್ರಕ್ಕೆ ಮಣಿದು ಮಂಗಳೂರು ರೈಲ್ವೇ ವಲಯವನ್ನು ಪುನಃ ಕೇರಳಕ್ಕೆ ನೀಡಿದರೆ ದೆಹಲಿಯಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಒಟ್ಟಾರೆಯಾಗಿ, ಈ ಆಡಳಿತಾತ್ಮಕ ವರ್ಗಾವಣೆಯು ಮುಂಬರುವ ದಿನಗಳಲ್ಲಿ ಕರ್ನಾಟಕದ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರಾವಳಿ ಕನ್ನಡಿಗರ ಮೂರು ದಶಕಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ದೊಡ್ಡ ಜಯ ಸಿಕ್ಕಿದ್ದು,. ಮಂಗಳೂರು ರೈಲ್ವೆ ಜಾಲವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ಮುಕ್ತಗೊಳಿಸಿ, ಕರ್ನಾಟಕದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ರೈಲ್ವೆ ಮಂಡಳಿಯು ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ತಿಳಿದಿರುವ ವಿಚಾರ.

Dailyhunt
Disclaimer: This content has not been generated, created or edited by Dailyhunt. Publisher: News Next