Dailyhunt
ನಾಳೆ ದ್ವಿತೀಯ ಪಿಯುಸಿ ರಿಸಲ್ಟ್​.! ದ್ವಿತೀಯ ಪಿಯುಸಿ ಫಲಿತಾಂಶ ಡಿಜಿಲಾಕರ್​ನಲ್ಲೂ ಲಭ್ಯ

ನಾಳೆ ದ್ವಿತೀಯ ಪಿಯುಸಿ ರಿಸಲ್ಟ್​.! ದ್ವಿತೀಯ ಪಿಯುಸಿ ಫಲಿತಾಂಶ ಡಿಜಿಲಾಕರ್​ನಲ್ಲೂ ಲಭ್ಯ

News Next 1 week ago

ನಾಳೆ ದ್ವಿತೀಯ ಪಿಯುಸಿ ರಿಸಲ್ಟ್​…! ದ್ವಿತೀಯ ಪಿಯುಸಿ ಫಲಿತಾಂಶ ಡಿಜಿಲಾಕರ್​ನಲ್ಲೂ ಲಭ್ಯ

" data-image-caption="

ನಾಳೆ ದ್ವಿತೀಯ ಪಿಯುಸಿ ರಿಸಲ್ಟ್​…! ದ್ವಿತೀಯ ಪಿಯುಸಿ ಫಲಿತಾಂಶ ಡಿಜಿಲಾಕರ್​ನಲ್ಲೂ ಲಭ್ಯ

" data-large-file="https://kannada.newsnext.live/wp-content/uploads/2026/04/puc-result-2026.jpg" />

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ (PUC Result 2026) ಕಾಯುತ್ತಿರುವ ವಿದ್ಯಾರ್ಥಿಗಳಿಗೆ , ಅಧಿಕೃತ ಫಲಿತಾಂಶ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

ನಾಳೆಯೇ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬೀಳಲಿದ್ದು ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ಫಲಿತಾಂಶ ವೀಕ್ಷಣೆಗೆ ಸಾವಿರಾರು ವಿದ್ಯಾರ್ಥಿಗಳು ಒಮ್ಮೆಯೇ ಅಧಿಕೃತ ವೆಬ್​ಸೈಟ್​ಗೆ ಲಾಗಿನ್​ ಆಗುವುದರಿಂದ ಸರ್ವರ್​ ಸಮಸ್ಯೆ ಉಂಟಾಗಿ ಫಲಿತಾಂಶ ವೀಕ್ಷಣೆ ಸಾಧ್ಯವಾಗುವುದಿಲ್ಲ. ಆದರೆ ಈ ಬಾರಿ ಇಂತಹ ಸಮಸ್ಯೆ ಬಾರದಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಹೊಸ ಕ್ರಮ ಕೈಗೊಂಡಿದೆ. ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೆಬ್​ಸೈಟ್​ನಲ್ಲಿ ಮಾತ್ರವಲ್ಲದೆ ಡಿಜಿಲಾಕರ್​ ಅಪ್ಲಿಕೇಶನ್​ ಮೂಲಕವೂ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ.

ಡಿಗ್ರಿ ಮುಗಿದಿದೆಯೇ ? ಮನೆಯಲ್ಲೇ ಕುಳಿತು ಲಕ್ಷ ಗಳಿಸಬಹುದಾದ 5 ಬೆಸ್ಟ್ 'ಫ್ರೀ' ಕೋರ್ಸ್‌

ಡಿಜಿಲಾಕರ್‌ನಲ್ಲಿ ಲಭ್ಯವಾಗುವ ಈ ಡಿಜಿಟಲ್ ಅಂಕಪಟ್ಟಿಗಳು ಭೌತಿಕ ಅಂಕಪಟ್ಟಿಗಳಿಗೆ ಸಮನಾದ ಅಧಿಕೃತ ಮಾನ್ಯತೆಯನ್ನು ಹೊಂದಿರುತ್ತವೆ. ಮುಂದಿನ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಅಥವಾ ಇತರೆ ಅಧಿಕೃತ ಕೆಲಸಗಳಿಗೆ ಈ ಡಿಜಿಟಲ್ ಅಂಕಪಟ್ಟಿಯನ್ನು ನೇರವಾಗಿ ಬಳಸಿಕೊಳ್ಳಬಹುದಾಗಿದೆ. ಕಾಲೇಜಿನಿಂದ ಮೂಲ ಅಂಕಪಟ್ಟಿ ಬರುವವರೆಗೂ ಕಾಯಬೇಕು ಎಂದಿಲ್ಲ. ಇದೇ ಡಿಜಿಟಲ್​ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕೆ ಬಳಸಿಕೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಅಂದಹಾಗೆ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಭವಿಷ್ಯ ನಾಳೆ ನಿರ್ಧಾರಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: News Next