Dailyhunt Logo
  • Light mode
    Follow system
    Dark mode
    • Play Story
    • App Story
PAN Card Photo Updates : ಪ್ಯಾನ್ ಕಾರ್ಡ್‌ನಲ್ಲಿರೋ ನಿಮ್ಮ ಹಳೇ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ಟ್ರಿಕ್!

PAN Card Photo Updates : ಪ್ಯಾನ್ ಕಾರ್ಡ್‌ನಲ್ಲಿರೋ ನಿಮ್ಮ ಹಳೇ ಫೋಟೋ ಬದಲಾಯಿಸಲು ಇಲ್ಲಿದೆ ಸುಲಭ ಟ್ರಿಕ್!

News Next 2 weeks ago

PAN Card Photo Updates : ಭಾರತದಲ್ಲಿ ಪ್ಯಾನ್ ಕಾರ್ಡ್ (PAN Card)‌ ಪ್ರಮುಖ ಹಣಕಾಸಿನ ದಾಖಲೆ. ಹಣಕಾಸು ಮಾತ್ರವಲ್ಲದೇ ಗುರುತಿನ ದಾಖಲೆಯಾಗಿಯೂ ಪಾನ್‌ ಕಾರ್ಡ್‌ ಬಳಕೆ ಆಗುತ್ತಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಆದಾಯ ತೆರಿಗೆ ಸಲ್ಲಿಕೆ (ITR), ಸಾಲ ಸೌಲಭ್ಯ ಸೇರಿದಂತೆ ಯಾವುದೇ ಪ್ರಮುಖ ಆರ್ಥಿಕ ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯ.

ಆದರೆ, ಹಲವರ ಪ್ಯಾನ್ ಕಾರ್ಡ್‌ಗಳಲ್ಲಿ ವರ್ಷಗಳ ಹಿಂದೆ ತೆಗೆಸಿದ್ದ ಹಳೇ ಫೋಟೋ ಇರುತ್ತದೆ. ಇನ್ನು ಕೆಲವರ ಕಾರ್ಡ್‌ನಲ್ಲಿ ಫೋಟೋ ತೀರಾ ಮಸುಕಾಗಿ ಗುರುತೇ ಸಿಗದಂತೆ ಇರುತ್ತದೆ.

ನಿಮ್ಮ ಪ್ಯಾನ್ ಕಾರ್ಡ್‌ನಲ್ಲೂ ಇದೇ ಸಮಸ್ಯೆ ಇದೆಯೇ ?

ಪ್ಯಾನ್ ಕಾರ್ಡ್‌ ಫೋಟೋ ಬದಲಾಯಿಸಲು ಕಚೇರಿಗಳಿಗೆ ಅಲೆಯಬೇಕಿಲ್ಲ. ಈಗ ನೀವು ಮನೆಯಲ್ಲೇ ಕುಳಿತು ಅತ್ಯಂತ ಸುಲಭವಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಪ್ಯಾನ್ ಕಾರ್ಡ್‌ನಲ್ಲಿ ಹೊಸ ಫೋಟೋವನ್ನು ಆನ್‌ಲೈನ್ ಮೂಲಕವೇ ಅಪ್ಡೇಟ್ ಮಾಡಬಹುದು. ಅದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ.

ಪ್ಯಾನ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸಲು ಬೇಕಾಗುವ ದಾಖಲೆಗಳು:‌

  • ಆಧಾರ್ ಕಾರ್ಡ್ (Aadhar Card) ಅಥವಾ ನಿಖರ ಗುರುತಿನ ಚೀಟಿ.
  • ನೀವು ಅಪ್ಡೇಟ್ ಮಾಡಬೇಕಿರುವ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಡಿಜಿಟಲ್ ಫೋಟೋ (JPEG ಫಾರ್ಮ್ಯಾಟ್).
  • ನಿಮ್ಮ ಡಿಜಿಟಲ್ ಸಹಿ (Signature).

ಆನ್‌ಲೈನ್‌ನಲ್ಲಿ ಫೋಟೋ ಅಪ್ಡೇಟ್ ಮಾಡುವುದು ಹೇಗೆ? (Step-by-Step Guide):

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಎನ್‌ಎಸ್‌ಡಿಎಲ್ (NSDL/Protean) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ‘Application Type’ ‌ ಎಂಬ ವಿಭಾಗದಲ್ಲಿ ‘Changes or Correction in existing PAN Data’ ಅನ್ನೋ ಆಯ್ಕೆಯನ್ನು ಕ್ಲಿಕ್‌ ಮಾಡಿ

ಮಾಹಿತಿ ಭರ್ತಿ ಮಾಡಿ: ನಿಮ್ಮ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಪ್ರಸ್ತುತ ಇರುವ ಪ್ಯಾನ್ ಕಾರ್ಡ್ ನಂಬರ್ ನಮೂದಿಸಿ ಸಬ್ಮಿಟ್ ಮಾಡಿ. ಆಗ ನಿಮಗೊಂದು ಟೋಕನ್ ನಂಬರ್ ಸಿಗುತ್ತದೆ.

ಫೋಟೋ ಮಿಸ್‌ಮ್ಯಾಚ್ ಆಯ್ಕೆ ಮಾಡಿ: ಮುಂದಿನ ಪುಟದಲ್ಲಿ ‘Photo Mismatch’ ಮತ್ತು ‘Signature Mismatch’ ಎಂಬ ಚೆಕ್‌ಬಾಕ್ಸ್‌ಗಳನ್ನು ಕಾಣುತ್ತೀರಿ. ಫೋಟೋ ಬದಲಾಯಿಸಲು ‘Photo Mismatch’ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಹೊಸ ಫೋಟೋ ಅಪ್ಲೋಡ್ ಮಾಡಿ: ಈಗ ನಿಮ್ಮ ಇತ್ತೀಚಿನ ಅತ್ಯುತ್ತಮ ಗುಣಮಟ್ಟದ ಫೋಟೋ ಮತ್ತು ಸಹಿಯ ಸ್ಕ್ಯಾನ್ ಪ್ರತಿಯನ್ನು ನಿಗದಿತ ಸೈಜ್‌ನಲ್ಲಿ ಅಪ್ಲೋಡ್ ಮಾಡಿ.

ಪಾವತಿ (Payment) ಮಾಡಿ: ಫೋಟೋ ಬದಲಾವಣೆಯ ಪ್ರಕ್ರಿಯೆಗೆ ಭಾರತದೊಳಗಿನ ವಿಳಾಸಕ್ಕೆ ಸುಮಾರು ₹100 ರಿಂದ ₹110 ರವರೆಗೆ ನಿಗದಿತ ಶುಲ್ಕವನ್ನು ಆನ್‌ಲೈನ್ (UPI, ನೆಟ್ ಬ್ಯಾಂಕಿಂಗ್ ಅಥವಾ ಕಾರ್ಡ್) ಮೂಲಕ ಪಾವತಿಸಬೇಕಾಗುತ್ತದೆ.

ಆಧಾರ್ ಇ-ಕೆವೈಸಿ (e-KYC): ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸುವ ಮೂಲಕ ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ ಮಾಡಿ.

ಹೊಸ ಕಾರ್ಡ್ ಮನೆಗೆ ಯಾವಾಗ ಬರಲಿದೆ ?

ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ಬಳಿಕ, ಆದಾಯ ತೆರಿಗೆ ಇಲಾಖೆಯು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇವಲ 15 ರಿಂದ 20 ದಿನಗಳ ಒಳಗಾಗಿ ನಿಮ್ಮ ಹೊಸ ಫೋಟೋ ಮತ್ತು ಸಹಿ ಹೊಂದಿರುವ ಹೊಚ್ಚ ಹೊಸ ಲ್ಯಾಮಿನೇಟೆಡ್ ಪ್ಯಾನ್ ಕಾರ್ಡ್ ನಿಮ್ಮ ಮನೆ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ತಲುಪುತ್ತದೆ.

how to change or update photo in pan card online easy steps kannada

Dailyhunt
Disclaimer: This content has not been generated, created or edited by Dailyhunt. Publisher: News Next