Dailyhunt Logo
  • Light mode
    Follow system
    Dark mode
    • Play Story
    • App Story
ಸಂಬಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವೇ? ಎಷ್ಟೋ ಜನಕ್ಕೆ ಈ ವಿಚಾರ ಗೊತ್ತೇ ಇಲ್ಲ

ಸಂಬಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವೇ? ಎಷ್ಟೋ ಜನಕ್ಕೆ ಈ ವಿಚಾರ ಗೊತ್ತೇ ಇಲ್ಲ

News Next 3 months ago

ಸಂಬಳ ಖಾತೆ (Salary Account) ಹೊಂದಿರುವ ಅನೇಕ ಉದ್ಯೋಗಿಗಳು, ಅದರಲ್ಲಿ ಎಂದಿಗೂ ಕನಿಷ್ಠ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಸಾಮಾನ್ಯವಾಗಿ ಸಂಬಳ ನಿಯಮಿತವಾಗಿ ಜಮೆಯಾಗುತ್ತಿರುವವರೆಗೆ ಈ ಮಾತು ಸತ್ಯವೇ ಆಗಿರುತ್ತದೆ. ಹೆಚ್ಚಿನ ಬ್ಯಾಂಕ್‌ಗಳು ಅಂತಹ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯಗೊಳಿಸುವುದಿಲ್ಲ.

ಆದರೆ ಉದ್ಯೋಗ ಬದಲಾದ ಬಳಿಕ ಪರಿಸ್ಥಿತಿ ಬದಲಾಗಬಹುದು. ಹೊಸ ಕಂಪನಿ ಬೇರೆ ಬ್ಯಾಂಕ್ ಖಾತೆಗೆ ಸಂಬಳ ಜಮೆ ಮಾಡಿದರೆ, ಹಳೆಯ ಸಂಬಳ ಖಾತೆಗೆ ಹಣ ಬರದೇ ಇರುವ ಪರಿಸ್ಥಿತಿ ಉಂಟಾಗುತ್ತದೆ. ಇದೇ ವೇಳೆ ಸಂಬಂಧಿತ ಬ್ಯಾಂಕ್ ತನ್ನ ನಿಯಮಗಳ ಪ್ರಕಾರ ಆ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆ (Savings Account) ಆಗಿ ಪರಿವರ್ತಿಸಬಹುದು.

ಈ ಬದಲಾವಣೆಗೆ ಬೇಕಾಗುವ ಅವಧಿ ಎಲ್ಲಾ ಬ್ಯಾಂಕ್‌ಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಕೆಲವು ಬ್ಯಾಂಕ್‌ಗಳು ಎರಡು ಅಥವಾ ಮೂರು ತಿಂಗಳಲ್ಲಿ ಕ್ರಮ ಕೈಗೊಂಡರೆ, ಇನ್ನು ಕೆಲವು ಬ್ಯಾಂಕ್‌ಗಳು ಆರು ತಿಂಗಳವರೆಗೆ ಕಾಯಬಹುದು. ಒಮ್ಮೆ ಖಾತೆ ಉಳಿತಾಯ ಖಾತೆಯಾಗಿ ಬದಲಾದರೆ, ಆ ಬ್ಯಾಂಕ್‌ನ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB/AMB) ನಿಯಮಗಳು ಅನ್ವಯವಾಗುತ್ತವೆ.

ನಿಗದಿತ ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಕಾಯ್ದುಕೊಳ್ಳದಿದ್ದರೆ, ಬ್ಯಾಂಕ್ ಸೇವಾ ಶುಲ್ಕವನ್ನು ವಿಧಿಸುವ ಸಾಧ್ಯತೆ ಇದೆ. ಆದ್ದರಿಂದ ಉದ್ಯೋಗ ಬದಲಾದ ನಂತರ ಹಳೆಯ ಸಂಬಳ ಖಾತೆಯ ಸ್ಥಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

ಇನ್ನು ಸಂಬಳ ಖಾತೆ ಉಳಿತಾಯ ಖಾತೆಯಾಗಿ ಬದಲಾಗುವುದನ್ನು ಮತ್ತು ಡಾರ್ಮೆಂಟ್ ಖಾತೆ ಆಗುವುದನ್ನು ಒಂದೇ ಎಂದು ಭಾವಿಸಬಾರದು. ಸಾಮಾನ್ಯವಾಗಿ ಎರಡು ವರ್ಷಗಳ ಕಾಲ ಯಾವುದೇ ಹಣಕಾಸು ವ್ಯವಹಾರ ನಡೆಯದಿದ್ದರೆ ಮಾತ್ರ ಬ್ಯಾಂಕ್ ಆ ಖಾತೆಯನ್ನು ಡಾರ್ಮೆಂಟ್ ಎಂದು ಪರಿಗಣಿಸುತ್ತದೆ.

ಹೀಗಾಗಿ ಉದ್ಯೋಗ ಬದಲಿಸಿದ ಬಳಿಕ ನಿಮ್ಮ ಹಳೆಯ ಸಂಬಳ ಖಾತೆ ಇನ್ನೂ Salary Account ಆಗಿಯೇ ಇದೆಯೇ ಅಥವಾ Savings Account ಆಗಿ ಪರಿವರ್ತನೆಯಾಗಿದೆಯೇ ಎಂಬುದನ್ನು ಬ್ಯಾಂಕ್‌ನಿಂದ ಖಚಿತಪಡಿಸಿಕೊಳ್ಳಿ. ಅಗತ್ಯವಿಲ್ಲದಿದ್ದರೆ ಖಾತೆಯನ್ನು ಮುಚ್ಚುವುದು ಅಥವಾ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರಿಂದ ಅನಗತ್ಯ ಶುಲ್ಕಗಳನ್ನು ತಪ್ಪಿಸಬಹುದು.

Dailyhunt
Disclaimer: This content has not been generated, created or edited by Dailyhunt. Publisher: News Next