Dailyhunt
ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್: ಇಂದಿನಿಂದ ಜಾರಿಯಾಗಲಿರುವ ಈ 5 ನಿಯಮಗಳ ಬಗ್ಗೆ ನಿಮಗೆ ಗೊತ್ತಾ ?

ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್: ಇಂದಿನಿಂದ ಜಾರಿಯಾಗಲಿರುವ ಈ 5 ನಿಯಮಗಳ ಬಗ್ಗೆ ನಿಮಗೆ ಗೊತ್ತಾ ?

News Next 1 week ago

ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ ಏಕಾಏಕಿ ಏರಿಕೆ ಕಂಡುಬಂದಿರುವುದು ಒಂದೆಡೆಯಾದರೆ ಇತ್ತ ಗೃಹಬಳಕೆ ಸಿಲಿಂಡರ್​ಗಳ ದರದಲ್ಲಿ ಏರಿಕೆ ಕಂಡುಬರದಿದ್ದರೂ ಇಂದಿನಿಂದ ಜಾರಿಯಾಗುವಂತೆ ಐದು ಕಡ್ಡಾಯ ನಿಯಮಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಇಂದಿನಿಂದ ಅನ್ವಯಗೊಳ್ಳುವಂತೆ ದೇಶಾದ್ಯಂತ ಗೃಹಬಳಕೆಯ ಸಿಲಿಂಡರ್​ ಹೊಂದಿರುವವರು ಈ ಐದು ಮಹತ್ವದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಸಂಭವಿಸಿದ ತೈಲ ಬಿಕ್ಕಟ್ಟು ಶಮನಕ್ಕಾಗಿ ದೇಶಾದ್ಯಂತ ಸಿಲಿಂಡರ್​ ವಿತರಣೆಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ . ಇದೇ ಉದ್ದೇಶದಿಂದ ಐದು ಮಹತ್ವದ ನಿಯಮಗಳು ಜಾರಿಗೆ ಬಂದಿದೆ.

ಎಲ್​ಪಿಜಿ ಸಿಲಿಂಡರ್ ವಿತರಣೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಇನ್ಮುಂದೆ ಗ್ಯಾಸ್​ ಸಿಲಿಂಡರ್​ಗಳಿಗಾಗಿ ಗ್ಯಾಸ್​ ಏಜೆನ್ಸಿಗೆ ಅಲೆಯುವ ಹಾಗಿಲ್ಲ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ ಮಿಸ್ಡ್​ ಕಾಲ್​ ಅಥವಾ ವಾಟ್ಸಾಪ್​ ಸಂದೇಶಗಳನ್ನು ಕಳಿಸುವ ಮೂಲಕವೇ ಗ್ಯಾಸ್​ ಸಿಲಿಂಡರ್​ ಬುಕ್​ ಮಾಡಬೇಕು.

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ! ವಾಣಿಜ್ಯ ಸಿಲಿಂಡರ್ ದರ ಹೆಚ್ಚಳ; ಅಕ್ರಮ ದಂಧೆಗೆ ಬೀಳಲಿದೆ ಬ್ರೇಕ್!

ಇನ್ನು ಒಟಿಪಿ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇಂದಿನಿಂದ ಒಟಿಪಿ ಪ್ರಕ್ರಿಯೆ ಕಡ್ಡಾಯಗೊಂಡಿದೆ. ನಿಮ್ಮ ಮನೆ ಬಾಗಿಲಿಗೆ ಬರುವ ಸಿಲಿಂಡರ್​ ವಿತರಕರಿಗೆ ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಗೆ ಬಂದಿರುವ OTP ನೀಡದ ಹೊರತು ನಿಮಗೆ ಸಿಲಿಂಡರ್​ ವಿತರಣೆ ಆಗುವುದಿಲ್ಲ.ಇನ್ನು ಎರಡು ಸಿಲಿಂಡರ್​ಗಳ ನಡುವಿನ ಬುಕ್ಕಿಂಗ್​ ಅವಧಿಯನ್ನೂ ಕಡ್ಡಾಯಗೊಳಿಸಲಾಗಿದೆ. ನಗರ ಪ್ರದೇಶದ ನಿವಾಸಿಗಳು 25 ದಿನಗಳ ಬಳಿಕ ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಸಿಲಿಂಡರ್​ ಪಡೆದ 45 ದಿನಗಳ ಬಳಿಕ ಮತ್ತೊಂದು ಸಿಲಿಂಡರ್​ ಬುಕ್​ ಮಾಡಬೇಕಿದೆ.

ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಭರ್ಜರಿ ಗುಡ್ ನ್ಯೂಸ್! ಏನಿದು 600 ಕೋಟಿ ಪ್ಲಾನ್? ಇಲ್ಲಿದೆ ಮಾಹಿತಿ

Dailyhunt
Disclaimer: This content has not been generated, created or edited by Dailyhunt. Publisher: News Next