ಸೂರ್ಯ ದೇವನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ತಿಂಗಳು ಸೂರ್ಯನು ಅವನದೇ ರಾಶಿಯಾದ ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಸಿಂಹ ರಾಶಿಯಲ್ಲಿ ಈಗಾಗಲೇ ಕೇತು ಸಂಚರಿಸುತ್ತಿದ್ದಾನೆ. ಸಿಂಹ ರಾಶಿಯಲ್ಲಿ ಸಂಧಿಸುವ ಸೂರ್ಯ ಮತ್ತು ಕೇತು ರಾಶಿ ಚಕ್ರದ ಎಲ್ಲ ರಾಶಿಯವರ ಮೇಲೆ ತಮ್ಮ ಪ್ರಭಾವ ಬೀರಲಿವೆ.
ಅದರಲ್ಲೂ ಮೂರು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಆಗಸ್ಟ್ 17 ರಂದು ಈ ಸಂಯೋಗವು ನಡೆಯಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಬಹಳ ಅಪರೂಪ ಹಾಗೂ ವಿಶೇಷ ಎನ್ನಲಾಗಿದೆ. ಸೂರ್ಯನು ತನ್ನದೇ ರಾಶಿಗೆ ಪ್ರವೇಶಿಸುವುದರಿಂದ ಅವನು ಅತ್ಯಂತ ಪ್ರಭಾವ ಶಾಲಿಯಾಗಿ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದಾನೆ. ಈ ಸಂಯೋಗ ಕೇತುವಿನೊಂದಿಗೆ ಆಗಿರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ, ಯಶಸ್ಸು, ಗೌರವ ಸಿಗಲಿದೆ. ಆ ರಾಶಿಗಳು ಯಾವುವು ಎಂದು ನೋಡೋಣ.
ಸಿಂಹ ರಾಶಿ
ಸೂರ್ಯ ಮತ್ತು ಕೇತುವಿನ ಸಂಯೋಗವು ಸಿಂಹ ರಾಶಿಯಲ್ಲೇ ಉಂಟಾಗುವುದರಿಂದ ಈ ರಾಶಿಯವರಿಗೆ ಅತ್ಯಂತ ಶುಭ ಸಮಯವಾಗಲಿದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮನೆ ಮತ್ತು ಉದ್ಯೋಗದ ಜಾಗದಲ್ಲಿ ನಿಮ್ಮ ಯಶಸ್ಸು, ಗೌರವ ಹೆಚ್ಚಾಗಲಿದೆ. ವೃತ್ತಜೀವನದಲ್ಲಿ ಸಾಧನೆ ಸಾಧ್ಯ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿದೆ. ಸೂರ್ಯನ ಪ್ರಭಾವದಿಂದ ನಿಮ್ಮ ಅದೃಷ್ಟ ಬೆಳಗಲಿದೆ. ಹೊಸ ಕೆಲಸ ಸಿಗುವ ಸಾಧ್ಯತೆಯಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಂಯೋಗವು ಪ್ರಯೋಜನಕಾರಿಯಾಗಲಿದೆ. ಹೊಸ ಆದಾಯದ ಮೂಲಗಳು ನಿಮ್ಮನ್ನ ಹುಡುಕಿ ಬರಲಿದೆ. ಕುಟುಂಬದಲ್ಲಿ ಸಂತೋಷ, ಒಳ್ಳೆಯ ಸುದ್ದಿಗಳು ಬರುತ್ತವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ವೃತ್ತಿಜೀವನದಲ್ಲಿ ತಕ್ಕ ಫಲ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಲಾಭ ಗಳಿಸುತ್ತೀರಿ. ಹೂಡಿಕೆ ಮಾಡಲು, ಹೊಸ ವ್ಯವಹಾರಗಳನ್ನು ಮಾಡಲು ಈ ಸಮಯ ಶುಭವಾಗಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುವ ಸಮಯ ಇದಾಗಿದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಸಾಧಿಸುತ್ತೀರಿ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದ ಬೆಂಬಲ ಸಿಗುವುದರಿಂದ ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಿಗಬಹುದು. ಹೊಸ ಮನೆಯ ಕನಸು ನನಸಾಗಲಿದೆ.
Watch on YouTube

