Dailyhunt Logo
  • Light mode
    Follow system
    Dark mode
    • Play Story
    • App Story
Tata Tiago Facelift : ಗ್ರಾಹಕರಿಗೆ ಹುಚ್ಚು ಹಿಡಿಸಿದ ಟಾಟಾ ಟಿಯಾಗೋ ಫೇಸ್‌ ಲಿಫ್ಟ್‌ : ಅತೀ ಕಡಿಮೆ ಬೆಲೆಯಲ್ಲಿ ಲಕ್ಸುರಿ ಫೀಚರ್ಸ್‌

Tata Tiago Facelift : ಗ್ರಾಹಕರಿಗೆ ಹುಚ್ಚು ಹಿಡಿಸಿದ ಟಾಟಾ ಟಿಯಾಗೋ ಫೇಸ್‌ ಲಿಫ್ಟ್‌ : ಅತೀ ಕಡಿಮೆ ಬೆಲೆಯಲ್ಲಿ ಲಕ್ಸುರಿ ಫೀಚರ್ಸ್‌

News Next 2 weeks ago

ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹ್ಯಾಚ್‌ ಬ್ಯಾಕ್‌ ಕಾರುಗಳದ್ದೇ ಕಾರುಬಾರು. ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಟಾಟಾ ಮೋಟಾರ್ಸ್‌ ಟಾಟಾ ಟಿಯಾಗೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿತ್ತು. ಇದೀಗ ಟಾಟಾ ಮೋಟಾರ್ಸ್ ತನ್ನ ಹೊಚ್ಚ ಹೊಸ 2026 ಟಾಟಾ ಟಿಯಾಗೊ ಫೇಸ್‌ಲಿಫ್ಟ್ (Tata Tiago Facelift) ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಟಾಟಾ ಟಿಯಾಗೊ ಫೇಸ್‌ಲಿಫ್ಟ್ (Tata Tiago Facelift) ಕಾರಿನ ಫೀಚರ್ಸ್‌ಗೆ ಗ್ರಾಹಕರು ಫಿದಾ ಆಗಿದ್ದಾರೆ. ಮಾತ್ರವಲ್ಲ ಕೇವಲ 4.69 ಲಕ್ಷ ಬೆಲೆಗೆ ಪ್ರೀಮಿಯಂ ಇಂಟಿರಿಯರ್‌ ಮತ್ತು ಸಗ್ಮೆಂಟ್‌ನಲ್ಲಿ ಈ ಕಾರನ್ನು ಪರಿಚಯಿಸಲಾಗಿದ್ದು, ಕಾರನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಈ ಹಿಂದಿನ ಮಾಡೆಲ್‌ಗೆ ಹೋಲಿಕೆ ಮಾಡಿದ್ರೆ ಈ ಕಾರು ಹೆಚ್ಚು ಅತ್ಯಾಕರ್ಷವಾಗಿದೆ.

ಟಾಟಾ ಟಿಯಾಗೊ ಫೇಸ್‌ಲಿಫ್ಟ್ (Tata Tiago Facelift) ಕಾರಿನಲ್ಲಿ ಏನೇನಿದೆ ?

ಟಿಯಾಗೋ ಕಾರನ್ನು ಸಂಪೂರ್ಣವಾಗಿ ಮರು ವಿನ್ಯಾಸ ಮಾಡಲಾಗಿದ್ದು, ಈ ಕಾರಿನ ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ (LED DRLs) ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಹಳೆಯ ಕ್ರೋಮ್ ಸ್ಟ್ರಿಪ್ ಅನ್ನು ತೆಗೆದುಹಾಕಿ ಗ್ಲಾಸ್-ಬ್ಲ್ಯಾಕ್ ಗ್ರಿಲ್ ಅಳವಡಿಸಲಾಗಿದೆ. ಕಾರಿನಲ್ಲಿ 360-ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದ್ದು, ಈ ಬಜೆಟ್ ಕಾರಿನಲ್ಲಿ ಅತ್ಯಂತ ಪ್ರೀಮಿಯಂ ಎನಿಸುವ 360-ಡಿಗ್ರಿ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮಾದರಿಯ ಕಾರುಗಳಲ್ಲೇ ಇದು ಮೊದಲ ಪ್ರಯತ್ನವಾಗಿದೆ.

ಇನ್ನು ಕಾರಿನ ಹಿಂಬಾಗ ಕೂಡ ಅತ್ಯಾಕರ್ಷಕವಾಗಿದೆ. ಕಾರಿನ ಹಿಂಭಾಗದಲ್ಲಿ ಕನೆಕ್ಟೆಡ್ ಎಲ್‌ಇಡಿ ಟೇಲ್ ಲ್ಯಾಂಪ್ಸ್, ಶಾರ್ಕ್-ಫಿನ್ ಆಂಟೆನಾ ಮತ್ತು ಸ್ಪೋರ್ಟಿ ರೂಫ್ ಸ್ಪಾಯ್ಲರ್ ಕಾರಿನ ಅಂದವನ್ನು ಹೆಚ್ಚಿಸಿವೆ. ಅಲ್ಲದೆ, 15-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಸ್ ಕಾರಿಗೆ ರಗಡ್ ಲುಕ್ ನೀಡುತ್ತದೆ. ಅದ್ರಲ್ಲೂ ಟಾಟಾ ಟಿಯಾಗೋ ಕಾರು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿರೋದು ಕಾರಿನ ಇಂಟಿರಿಯರ್‌. ಕಾರಿನ ಒಳಗಡೆ ಕಾಲಿಟ್ಟರೆ ಸಾಕು ಕಂಪ್ಲೀಟ್‌ ಪ್ರೀಮಿಯಂ ಫೀಲ್‌ ಸಿಗೋದು ಪಕ್ಕಾ. ಹಳೆಯ ಆಲ್-ಬ್ಲ್ಯಾಕ್ ಥೀಮ್ ಬದಲಿಗೆ ಈಗ ಲೈಟ್ ಗ್ರೇ ಮತ್ತು ಬ್ಲ್ಯಾಕ್ ಕಾಂಬಿನೇಷನ್‌ನ ಡ್ಯುಯಲ್-ಟೋನ್ ಇಂಟೀರಿಯರ್ ನೀಡಲಾಗಿದೆ.

ಡ್ಯಾಶ್‌ಬೋರ್ಡ್ ಮಧ್ಯದಲ್ಲಿ 10.25-ಇಂಚಿನ ಬೃಹತ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲ ನೀಡಲಾಗಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್ ಫೀಚರ್ಸ್‌ಗಳಿವೆ.ಸ್ಟ್ರಾಂಗ್ ಎಂಜಿನ್ ಮತ್ತು ಸುರಕ್ಷತೆಎಂಜಿನ್ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಟಾಟಾ ಟಿಯಾಗೋ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 86 PS ಪವರ್ ಹಾಗೂ 113 Nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುಯಲ್ ಮತ್ತು 5-ಸ್ಪೀಡ್ ಎಎಮ್‌ಟಿ (Paddle Shifters ಜೊತೆಗೆ) ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಮೈಲೇಜ್ ಪ್ರಿಯರಿಗಾಗಿ ಕಂಪನಿಯು ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ (CNG) ಆಪ್ಷನ್ ಕೂಡ ನೀಡುತ್ತಿದೆ.

ಹೊಸ ಮಾದರಿಯ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬೇಸ್ ಮಾಡೆಲ್‌ನಿಂದಲೇ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ನೀಡಲಾಗಿದೆ. ಇದರೊಂದಿಗೆ ಇಎಸ್‌ಸಿ (ESC), ಹಿಲ್ ಹೋಲ್ಡ್ ಕಂಟ್ರೋಲ್, ಎಬಿಎಸ್, ಇಬಿಡಿ ಮತ್ತು ಟಿಪಿಎಮ್‌ಎಸ್ (TPMS) ನಂತಹ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳಿವೆ.

ಟಾಟಾ ಟಿಯಾಗೊ ಕಾರು ಮಾರುತಿ ಸ್ವಿಫ್ಟ್, ಹ್ಯುಂಡೈ ಗ್ರಾಂಡ್ i10 ನಿಯೋಸ್ ಮತ್ತು ಮಾರುತಿ ಸೆಲೆರಿಯೊ ಕಾರುಗಳಿಗೆ ಕಠಿಣ ಪೈಪೋಟಿ ನೀಡಲಿದೆ

tata tiago facelift 2026 launched price specs.

Dailyhunt
Disclaimer: This content has not been generated, created or edited by Dailyhunt. Publisher: News Next