Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ ಕಾಂಗ್ರೆಸ್‌ನಿಂದ ರಘಪತಿ ಭಟ್‌ ಸ್ಪರ್ಧೆ : ಬಿಜೆಪಿಗೆ ಲಾಭವೋ ? ನಷ್ಟವೋ ?

ಉಡುಪಿ ಕಾಂಗ್ರೆಸ್‌ನಿಂದ ರಘಪತಿ ಭಟ್‌ ಸ್ಪರ್ಧೆ : ಬಿಜೆಪಿಗೆ ಲಾಭವೋ ? ನಷ್ಟವೋ ?

News Next 2 days ago

ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಸುಮಾರು 18 ತಿಂಗಳು ಬಾಕಿ ಇದೆ. ಆದರೆ ಕರಾವಳಿಯ ರಾಜಕೀಯ ಅಖಾಡದಲ್ಲಿ ಈಗಾಗಲೇ ಚುನಾವಣಾ ಲೆಕ್ಕಾಚಾರಗಳು ಜೋರಾಗಿವೆ. ಅದರಲ್ಲೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಒಂದು ರಾಜಕೀಯ ಬೆಳವಣಿಗೆ ರಾಜ್ಯದ ಗಮನ ಸೆಳೆಯುತ್ತಿದೆ.

ಬಿಜೆಪಿಯ ಮಾಜಿ ಶಾಸಕ, ಹಿಂದುತ್ವದ ಪ್ರಭಾವಿ ನಾಯಕ ಕೆ. ರಘುಪತಿ ಭಟ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಇದೀಗ ಉಡುಪಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಹೊತ್ತಲ್ಲೇ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ರಘುಪತಿ ಭಟ್‌ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ರಾಜ್ಯದ ಕಾಂಗ್ರೆಸ್‌ ನಾಯಕರು ಕೂಡ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ರೆ, ರಘುಪತಿ ಭಟ್‌ ಮಾತ್ರ ಇನ್ನೂ ಖಚಿತ ಪಡಿಸಿಲ್ಲ ಎನ್ನುವ ಮಾಹಿತಿ ಹೊರಬಿಳ್ತಾ ಇದೆ .

ಬಿಜೆಪಿಯ ಕಟ್ಟಾಳು ಡಾ.,ವಿ.ಎಸ್.ಆಚಾರ್ಯ ಅವರ ರಾಜಕೀಯದ ಗರಡಿಯಲ್ಲಿ ಬೆಳೆದ ಕೆ.ರಘುಪತಿ ಭಟ್‌ ಮೂರು ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್‌, 2008ರಲ್ಲಿ ಮರು ಆಯ್ಕೆಯಾದ್ರು.

ಆದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಅವಕಾಶ ಸಿಗದೇ ಇದ್ದರೂ ಕೂಡ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮತ್ತೆ ಸ್ಪರ್ಧೆ ಮಾಡಿ ಮೀನುಗಾರಿಕಾ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಅವರ ಎದುರು ಭರ್ಜರಿ ಗೆಲುವು ದಾಖಲಿಸಿದ್ದರು.

ಆದರೆ 2023ರ ಚುನಾವಣೆಯಲ್ಲಿ ರಘುಪತಿ ಭಟ್‌ ಅವರಿಗೆ ಸ್ಪರ್ಧಿಸೋದಕ್ಕೆ ಬಿಜೆಪಿ ಅವಕಾಶ ನೀಡಲಿಲ್ಲ. ಹೀಗಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯಶಪಾಲ್‌ ಸುವರ್ಣ ಉಡುಪಿಯ ಹಾಲಿ ಶಾಸಕರಾಗಿದ್ದಾರೆ.

1952 ರಿಂದ 2026ರವರೆಗಿನ ಉಡುಪಿ ವಿಧಾನಸಭಾ ಕ್ಷೇತ್ರದ ಅಂಕಿ ಅಂಶಗಳನ್ನು ಲೆಕ್ಕಾಚಾರ ಹಾಕಿದ್ರೆ, ಇದುವರೆಗೆ ನಡೆದ 16 ವಿಧಾನಸಭಾ ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಪಕ್ಷ ಗೆಲುವು ದಾಖಲಿಸಿದ್ರೆ, 5 ಬಾರಿ ಭಾರತೀಯ ಜನತಾ ಪಕ್ಷದ ಶಾಸಕರು ಆರಿಸಿ ಬಂದಿದ್ದಾರೆ. ಉಳಿದಂತೆ ಒಂದು ಬಾರಿ ಪ್ರಜಾ ಸೋಶಿಯಲಿಸ್ಟ್‌ ಪಕ್ಷ ಗೆಲುವು ಕಂಡಿದೆ.

ಕಾಂಗ್ರೆಸ್‌ನಿಂದ ಕೆ.ರಘುಪತಿ ಭಟ್‌ ಸ್ಪರ್ಧೆ ಕಾಂಗ್ರೆಸ್‌ಗೆ ಲಾಭವೇನು ?

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಿಂದಲೂ ಬಿಜೆಪಿಯ ಶಾಸಕರಿದ್ದಾರೆ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಜನಪ್ರತಿನಿಧಿಗಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ರಘುಪತಿ ಭಟ್‌ , ಹೆಗಲಿಗೆ ಹೆಗಲುಕೊಟ್ಟು ಯಶಪಾಲ್‌ ಸುವರ್ಣ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.

ಆದರೆ ಶಾಸಕರಾದ ನಂತರದಲ್ಲಿ ಯಶಪಾಲ್‌ ಸುವರ್ಣ ವರ್ತನೆಗೆ ಬೇಸತ್ತು ರಘಪತಿ ಭಟ್‌ ಕಾಂಗ್ರೆಸ್‌ ಪಕ್ಷದ ಕಡೆಗೆ ಮುಖಮಾಡಿದ್ದೇನೆ ಅನ್ನುವ ವಿಚಾರವನ್ನು ಸ್ವತಃ ರಘುಪತಿ ಭಟ್‌ ನ್ಯೂಸ್‌ ನೆಕ್ಸ್ಟ್‌ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Watch on YouTube

ರಘುಪತಿ ಭಟ್‌ ಉಡುಪಿಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ನೆಲೆಯನ್ನು ಕಲ್ಪಿಸಿದ್ದಾರೆ. ಬಿಜೆಪಿಯಿಂದ ರಘುಪತಿ ಭಟ್ ಉಚ್ಚಾಟಿತರಾಗಿದ್ದರೂ ಕೂಡ ಬಿಜೆಪಿಯ ಹಲವು ಸ್ಥಳೀಯ ನಾಯಕರು, ಕಾರ್ಯಕರ್ತರು ರಘುಪತಿ ಭಟ್‌ ಜೊತೆಗೆ ನಿಂತಿದ್ದಾರೆ ಅನ್ನೋದು ಸುಳ್ಳಲ್ಲ. ಒಂದೊಮ್ಮೆ ರಘುಪತಿ ಭಟ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆದ್ರೆ ಬಿಜೆಪಿ ಉಡುಪಿಯಲ್ಲಿ ಒಡೆದ ಮನೆ ಆಗೋದು ಬಹುತೇಖ ಖಚಿತ.

ಒಂದಿಷ್ಟು ನಾಯಕರು ರಘುಪತಿ ಭಟ್‌ ಬೆನ್ನಿಗೆ ನಿಲ್ಲುವ ಸಾಧ್ಯತೆಯೂ ಇದೆ. ಆದರೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ನಾಯಕರು, ಕಾರ್ಯಕರ್ತರನ್ನು ಉಡುಪಿಯ ಕಾಂಗ್ರೆಸ್‌ ಒಪ್ಪಿಕೊಳ್ಳುತ್ತಾ ? ಇನ್ನು ಪಕ್ಷದ ತತ್ವ ಸಿದ್ದಾಂತ, ಹಿಂದುತ್ವಕ್ಕೆ ಒಗ್ಗಿಕೊಂಡಿರುವ ಕಾರ್ಯಕರ್ತರು, ಬಿಜೆಪಿ ನಾಯಕರು ತಮ್ಮ ಸಿದ್ದಾಂತವನ್ನು ಮರೆತು ಕಾಂಗ್ರೆಸ್‌ ಕೈ ಹಿಡಿಯೋದಕ್ಕೆ ಸಾಧ್ಯವೇ ಅನ್ನೋ ಚರ್ಚೆಯೂ ನಡೆಯುತ್ತಿದೆ.

ಅಷ್ಟೇ ಯಾಕೆ, ಸ್ವತಃ ರಘುಪತಿ ಅಷ್ಟು ಸುಲಭಕ್ಕೆ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆ ಆಗೋದಿಲ್ಲಾ ಅನ್ನೋ ಅಭಿಪ್ರಾಯವನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಒಂದೊಮ್ಮೆ ರಘುಪತಿ ಭಟ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆದ್ರೆ ಕಾಂಗ್ರೆಸ್‌ ಪಕ್ಷಕ್ಕೆ ಪ್ಲಸ್‌ ಆಗೋದು ಗ್ಯಾರಂಟಿ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳ ಪೈಕಿ ಪುತ್ತೂರು ಶಾಸಕ ಅಶೋಕ್‌ ರೈ, ಉಳ್ಳಾಲ ಶಾಸಕ ಯು.ಟಿ.ಖಾದರ್‌ ಹೊರತು ಪಡಿಸಿದ್ರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಶಾಸಕರಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್‌ ಮತ್ತೆ ಅಸ್ಥಿತ್ವ ಪಡೆಯಬೇಕು ಅನ್ನೋ ಕಾರಣದಿಂದಲೇ ಕಾಂಗ್ರೆಸ್‌ ಇದೀಗ ರಘುಪತಿ ಭಟ್‌ ಅವರ ಮೇಲೆ ಕಣ್ಣಿಟ್ಟಿದೆ.

ಹಿಂದುತ್ವದ ನಾಯಕನಾಗಿ, ಕರಾವಳಿ ಭಾಗದಲ್ಲಿ ಬಿಜೆಪಿಯ ಪ್ರಭಾವಿ ಶಾಸಕರಾಗಿದ್ದ ರಘುಪತಿ ಭಟ್‌ ಕಾಂಗ್ರೆಸ್‌ ಸೇರ್ಪಡೆ, ಪಕ್ಷಕ್ಕೆ ಹೊಸ ಹುರುಪು ತರಬಹುದು. ಬಿಜೆಪಿಯ ಚುನಾವಣಾ ಚಾಣಾಕ್ಷ್ಯತೆ ಕಾಂಗ್ರೆಸ್‌ಗೂ ವರದಾನ ಆಗಬಹುದು.

ಒಂದೊಮ್ಮೆ ರಘುಪತಿ ಭಟ್‌ ಶೀಘ್ರದಲ್ಲಿಯೇ ಕಾಂಗ್ರೆಸ್‌ ಸೇರಿದ್ರೆ, ಪಕ್ಷ ಪ್ರಬಲ ಹುದ್ದೆಯನ್ನೂ ನೀಡಬಹುದು. ಆದರೆ ಉಡುಪಿಯ ಕಾಂಗ್ರೆಸ್‌ ನಾಯಕರು ರಘುಪತಿ ಭಟ್‌ ಅವರನ್ನು ಒಪ್ಪಿಕೊಳ್ತಾರಾ ಅನ್ನೋದು ಸದ್ಯದ ಪ್ರಶ್ನೆ.

ಕಾಂಗ್ರೆಸ್‌ನಿಂದ ರಘುಪತಿ ಭಟ್‌ Vs ಬಿಜೆಪಿಯಿಂದ ಯಾರು ಸ್ಪರ್ಧೆ ?

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ವತಃ ಕೆ.ರಘುಪತಿ ಭಟ್‌ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಇದ್ದರೂ ತಾನು ಪಕ್ಷ ಬಿಡಲಾರೆ, ಸಾಯುವ ಹೊತ್ತಲ್ಲೂ ಮೈ ಮೇಲೆ ಕೇಸರಿ ಶಾಲು ಇರಬೇಕು ಅಂದಿದ್ದ ರಘುಪತಿ ಭಟ್‌ ಶೇಕ್‌ ಆಗಿರೋದು ಖಚಿತ.

ಒಂದೆಡೆ ಶಾಸಕ ಯಶಪಾಲ್‌ ಸುವರ್ಣ ಮೇಲಿನ ಮುನಿಸು, ಮತ್ತೊಂದೆಡೆ ಬಿಜೆಪಿ ನಾಯಕರ ಮೇಲಿನ ಕೋಪ. ಜೊತೆಗೆ ಡಿಕೆ ಶಿವಕುಮಾರ್‌ ಅವರ ನಡುವಿನ ಒಡನಾಟದ ಕಾರಣದಿಂದಲೇ ರಘುಪತಿ ಭಟ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಆಗಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನಲಾಗುತ್ತಿದೆ..

Watch on YouTube

ಒಂದೊಮ್ಮೆ ಕಾಂಗ್ರೆಸ್‌ನಿಂದ ರಘುಪತಿ ಭಟ್‌ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಯಾರಿಗೆ ಟಿಕೆಟ್‌ ನೀಡುತ್ತೆ ಅನ್ನೋದು ಬಹಳ ಮುಖ್ಯ. ಸದ್ಯ ಉಡುಪಿಯ ಶಾಸಕರಾಗಿರೋದು ಯಶಪಾಲ್‌ ಸುವರ್ಣ. ಕಟ್ಟರ್‌ ಹಿಂದುತ್ವದ ಹಿನ್ನೆಲೆಯುಳ್ಳ ಯಶಪಾಲ್‌ ಸುವರ್ಣ ಕಳೆದ ಚುನಾವಣೆಯಲ್ಲಿ ಹಿಜಾಬ್‌ ವಿಚಾರವನ್ನೇ ಮುಂದಿಟ್ಟು ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಿಕೊಂಡಿದ್ರು.

ಚುನಾವಣಾ ಹೊತ್ತಲ್ಲಿ ರಘುಪತಿ ಭಟ್‌ ಯಶಪಾಲ್‌ ಸುವರ್ಣ ಅವರನ್ನು ಹೆಗಲಿಗೆ ಹೆಗಲು ಕೊಟ್ಟು, ಗೆಲ್ಲಿಸಿಕೊಂಡು ಬಂದಿದ್ದರು. ಸಾಮಾನ್ಯ ಕಾರ್ಯಕರ್ತರಾಗಿದ್ದ ಯಶಪಾಲ್‌ ಸುವರ್ಣ ಅವರನ್ನು ರಾಜಕೀಯವಾಗಿ ಬೆಳೆದಿದ್ದು ಇದೇ ರಘುಪತಿ ಭಟ್.. ಹೀಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಗುರುಶಿಷ್ಯರ ನಡುವಿನ ಕಾದಾಟಕ್ಕೆ ವೇದಿಕೆ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ರಘುಪತಿ ಭಟ್‌ ಕಾಂಗ್ರೆಸ್‌ ಅಭ್ಯರ್ಥಿಯಾದ್ರೆ ಸಿಂಪಥಿ ವರ್ಕೌಟ್‌ ಆಗುವ ಸಾಧ್ಯತೆಯಿದೆ. ಇದೇ ಕಾರಣದಿಂದಲೇ ರಘುಪತಿ ಭಟ್‌ ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿ ಆದ್ರೆ ಯಶಪಾಲ್‌ ಸುವರ್ಣ ಬದಲು ಬದಲಿ ನಾಯಕನಿಗೆ ಬಿಜೆಪಿ ಮಣೆ ಹಾಕುತ್ತೆ ಅನ್ನೋ ಮಾತುಗಳು ಕೇಳಿಬರ್ತಿದೆ.

ರಘುಪತಿ ಭಟ್‌ Vs ಯಶಪಾಲ್‌ ಸುವರ್ಣ

ಶಾಸಕರಾಗಿ ರಘುಪತಿ ಭಟ್‌ ಹಾಗೂ ಯಶಪಾಲ್‌ ಸುವರ್ಣ ಅವರ ಕಾರ್ಯವೈಖರಿಯನ್ನು ತುಲನೆ ಮಾಡಿದ್ರೆ, ರಘುಪತಿ ಭಟ್‌ ಅವರ ಅಧಿಕಾರದ ಅವಧಿಯಲ್ಲಿ ಉಡುಪಿ ಸಾಕಷ್ಟು ಅಭಿವೃದ್ದಿ ಕಂಡಿದೆ.

ಯಶಪಾಲ್‌ ಹಿಂದುತ್ವದ ವಿಚಾರದಲ್ಲಿ ಮುಂದಿದ್ದರೂ ಕೂಡ, ಅಭಿವೃದ್ದಿ ವಿಚಾರದಲ್ಲಿ ಹಿಂದೆ ಉಳಿದಿದ್ದಾರೆ ಅನ್ನೋ ಮಾತಿದೆ. ಜೊತೆಗೆ ಬಿಜೆಪಿಯ ಕೆಲ ನಾಯಕರು ಕೂಡ ಯಶಪಾಲ್‌ ಸುವರ್ಣ ವಿರುದ್ದ ಮುನಿಸಿಕೊಂಡಿರುವ ಮೈನಸ್‌ ಆಗುವ ಸಾಧ್ಯತೆಯಿದೆ.

ಒಂದೊಮ್ಮೆ ಯಶಪಾಲ್‌ ಸುವರ್ಣ ಅವರಿಗೆ ಬಿಜೆಪಿ ಟಿಕೆಟ್‌ ನೀಡದೇ ಇದ್ರೆ ಬಿಜೆಪಿಯಿಂದ ಯಾರು ಸ್ಪರ್ಧೆ ಮಾಡ್ತಾರೆ ಅಂದಾಗ ಅಲ್ಲಿ ಹಲವು ಹೆಸರುಗಳು ಕೇಳಿಬರ್ತಿದೆ. ಅದ್ರಲ್ಲೀ ಮುಂಚೂಣಿಯಲ್ಲಿ ಇರೋದು ಪ್ರಮೋದ್‌ ಮಧ್ವರಾಜ್‌ ಹೆಸರು. ಯಾಕೆಂದ್ರೆ ಯಶಪಾಲ್‌ ಸುವರ್ಣ ಹಾಗೂ ಪ್ರಮೋದ್‌ ಮಧ್ವರಾಜ್‌ ಇಬ್ಬರೂ ಕೂಡ ಮೊಗವೀರ ಸಮುದಾಯದವರು.

ಹೀಗಾಗಿ ಇಬ್ಬರಲ್ಲಿ ಒಬ್ಬರಿಗೆ ಉಡುಪಿ ಟಿಕೆಟ್‌ ಸಿಗುವ ಸಾಧ್ಯತೆಯಿದೆ. ಕಳೆದ ವಿಧಾನಸಭೆ ಹಾಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡುತ್ತೆ ಎನ್ನಲಾಗಿತ್ತು. ಆದರೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಪ್ರಮೋದ್‌ ಮಧ್ವರಾಜ್‌ ಗೆ ಬಿಜೆಪಿ ಅವಕಾಶವನ್ನು ಕೊಟ್ಟಿಲ್ಲ. ಹೀಗಾಗಿ ರಘುಪತಿ ಭಟ್‌ ಉಡುಪಿಯಿಂದ ಸ್ಪರ್ಧೆ ಮಾಡಿದ್ರೆ ಪ್ರಮೋದ್‌ ಮಧ್ವರಾಜ್‌ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾತು ಕೇ:ಳಿಬರ್ತಿದೆ.

ಉಡುಪಿಯಲ್ಲಿ ಬಿಜೆಪಿ ಪ್ರಬಲವಾಗಿದ್ದ ಅವಧಿಯಲ್ಲಿಯೇ ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಸುಧಾಕರ್ ಶೆಟ್ಟಿ ಅವರ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಮೋದ್‌ ಮಧ್ವರಾಜ್‌ ಕುಟುಂಬಕ್ಕೆ ಉತ್ತಮ ಬೆಂಬಲವಿದೆ. ಈ ಹಿಂದೆ ಪ್ರಮೋದ್‌ ಮಧ್ವರಾಜ್‌ ಅವರ ತಂದೆ ಎಂ. ಮಧ್ವರಾಜ್‌ ಅವರು 1962ರಲ್ಲಿ ಶಾಸಕರಾಗಿದ್ರೆ, ತಾಯಿ ಮನೋರಮಾ ಮಧ್ವರಾಜ್‌ 1967, 1972, 1989ರಲ್ಲಿ ಒಟ್ಟು ಮೂರು ಬಾರಿ ಶಾಸಕರಾಗಿದ್ದಾರೆ. ಅಷ್ಟೇ ಅಲ್ಲದೇ ಮನೋರಮಾ ಉಡುಪಿಯ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಪ್ರಮೋದ್‌ ಮಧ್ವರಾಜ್‌ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ರಘುಪತಿ ಭಟ್‌ ಅವರಿಗೆ ಪ್ರಬಲ ಪೈಪೋಟಿ ನೀಡಬಲ್ಲರು ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಆದರೆ ಉಡುಪಿ ವಿಧಾನಸಭಾ ಚುನಾವಣೆ ಬಹುತೇಕ ಹಿಂದುತ್ವ ಹಾಗೂ ಅಭಿವೃದ್ದಿಯ ಆಧಾರದಲ್ಲಿಯೇ ನಡೆಯುತ್ತಿದೆ.

ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ಪಕ್ಷದಿಂದ ಬಂದವರು, ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಯಶಪಾಲ್‌ ಸುವರ್ಣ ಬೆಂಬಲಿಗರು ಪ್ರಮೋದ್‌ ಮಧ್ವರಾಜ್‌ ಅವರನ್ನು ಬೆಂಬಲಿಸ್ತಾರಾ ? ಅನ್ನೋ ಪ್ರಶ್ನೆಯೂ ಇದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮೋದ್‌ ಮಧ್ವರಾಜ್‌ ಹಾಗೂ ರಘುಪತಿ ಭಟ್‌ ಇಬ್ಬರೂ ಕೂಡ ಸ್ಪರ್ಧೆ ಮಾಡಿರಲಿಲ್ಲ. ಆದರೆ 2028ರ ಚುನಾವಣೆಯಲ್ಲಿ ರಘುಪತಿ ಭಟ್‌ಗೆ ಪ್ರಮೋದ್‌ ಮಧ್ವರಾಜ್‌ ಎದುರಾಳಿ ಆಗ್ತಾರಾ ? ಇಲ್ಲಾ ಗುರು ರಘುಪತಿ ಭಟ್‌ ಹಾಗೂ ಶಿಷ್ಯ ಯಶಪಾಲ್‌ ಸುವರ್ಣ ಕಾದಾಟಕ್ಕೆ ವೇದಿಕೆ ಆಗುತ್ತಾ ಅನ್ನೋದು ಸದ್ಯದ ಕುತೂಹಲ.

Watch on YouTube

Dailyhunt
Disclaimer: This content has not been generated, created or edited by Dailyhunt. Publisher: News Next