ಮೂಲಗಳ ಪ್ರಕಾರ, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ( Facebook CEO Mark Zuckerberg) ಅಕ್ಟೋಬರ್ 28 ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ತನ್ನ ಯೋಜನೆಗಳನ್ನು ಬಹಿರಂಗಪಡಿಸುತ್ತಾರೆ. ಈ ವೇಳೆಯೇ ಫೇಸ್‌ಬುಕ್‌ನ ಹೊಸ ರೂಪ ಮತ್ತು ಹೆಸರು ಬದಲಾವಣೆಯನ್ನು ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಈಗಾಗಲೇ ಫೇಸ್ ಬುಕ್ನ ಇನ್‌ಸ್ಟಾಗ್ರಾಮ್, ವಾಟ್ಸಾಪ್, ಆಕ್ಯುಲಸ್ ಆಯಪ್ಗಳು ಕೂಡ ಅದರ ಮೂಲಕವೇ ಗ್ರಾಹಕರಿಗೆ ಸಿಗುವಂತೆ ಯೋಜನೆ ರೂಪಿಸಲಾಗಿದೆ.

ಈ ಸಂಬಂಧ 10,000 ಕ್ಕೂ ಹೆಚ್ಚು Facebook ಉದ್ಯೋಗಿಗಳು AR ಗ್ಲಾಸ್‌ಗಳಂತಹ ಗ್ರಾಹಕ ಹಾರ್ಡ್‌ವೇರ್ ಅನ್ನು ನಿರ್ಮಿಸುತ್ತಿದ್ದಾರೆ, ಅದು ಅಂತಿಮವಾದ ಬಳಿಕ ಸರ್ವವ್ಯಾಪಿಯಾಗಲಿದೆ

ಫೇಸ್‌ಬುಕ್‌ನ ಪರಿವರ್ತನೆಯು ಪ್ರಾಥಮಿಕವಾಗಿ ಸಾಮಾಜಿಕ ಮಾಧ್ಯಮ ಕಂಪನಿಯಾಗಿ ಮೆಟಾವರ್ಸ್ ಕಂಪನಿಯಾಗಿರಲಿದೆ. ಭವಿಷ್ಯದ ಕೆಲಸವನ್ನು ಮತ್ತಷ್ಟು ಪ್ರತ್ಯೇಕಿಸಲು ರಿಬ್ರಾಂಡ್ ಸಹ ಸಹಾಯ ಮಾಡುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ.

ಈ ರೀತಿ ಹೆಸರು ಬದಲಾಯಿಸಿರುವ ಮೊದಲ ಟೆಕ್ ದೈತ್ಯ ಕಂಪನಿ ಫೇಸ್‌ಬುಕ್ ಅಲ್ಲ. ಈ ಹಿಂದೆ 2015ರಲ್ಲಿ ಗೂಗಲ್ ಕೂಡ ಇದೇ ರೀತಿ ಪ್ರಯತ್ನ ನಡೆಸಿತು. ಈ ವೇಳೆ ಗೂಗಲ್ ಇನ್ಮುಂದೆ ಕೇವಲ ಹುಡಕಾಟದ ಜಾಲತಾಣವಾಗಿರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿತು

ಮುಂದಿನ ಪೀಳಿಗೆಯ ತಂತ್ರಜ್ಞಾನದ ಮೇಲೆ ಹೆಚ್ಚಿನ ಗಮನ ಹರಿಸಲು ಫೇಸ್‌ಬುಕ್ ಈ ಮಾರ್ಪಡಿಗೆ ಮುಂದಾಗಿದೆ. ಇನ್ನು ಫೇಸ್‌ಬುಕ್ ಯಾವ ಹೆಸರಿನ ಮೂಲಕ ಜನರಿಗೆ ಪರಿಚಿತವಾಗಲಿದೆ ಎಂಬ ಕುರಿತು ರಹಸ್ಯ ಕಾಪಾಡಿಕೊಳ್ಳಲಾಗಿದೆ.

