Thursday, 29 Apr, 7.22 pm News18 ಕನ್ನಡ


Suresh Raina: ಐಪಿಎಲ್​ನಲ್ಲಿ ವಿಶೇಷ ಸಾಧನೆ ಮಾಡಿದ ರೈನಾ: ಮುಂದಿನ ಟಾರ್ಗೆಟ್ ಕೊಹ್ಲಿ ದಾಖಲೆ..!

ದೆಹಲಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 23ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಉಪನಾಯಕ ಸುರೇಶ್ ರೈನಾ ವಿಶೇಷ ಸಾಧನೆ ಮೆರೆದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್​ನಲ್ಲಿ 200 ಸಿಕ್ಸರ್​ಗಳ ಗಡಿದಾಟಿದ್ದ ರೈನಾ, ಇದೀಗ 500 ಬೌಂಡರಿಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

ಈ ಮೂಲಕ ಐಪಿಎಲ್​ನಲ್ಲಿ 500 ಬೌಂಡರಿ ಬಾರಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ರೈನಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್, ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ಇನ್ನು 200ಕ್ಕಿಂತ ಅಧಿಕ ಸಿಕ್ಸ್ ಹಾಗೂ 500ಕ್ಕಿಂತ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ರೈನಾ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ಇಂತಹದೊಂದು ಸಾಧನೆಯನ್ನು ಡೇವಿಡ್ ವಾರ್ನರ್ ಹಾಗೂ ವಿರಾಟ್ ಕೊಹ್ಲಿ ಮಾಡಿದ್ದಾರೆ. ಇದೀಗ ಈ ವಿಶೇಷ ಸಾಧಕರ ಪಟ್ಟಿಗೆ ರೈನಾ ಎಂಟ್ರಿ ಕೊಟ್ಟಿದ್ದಾರೆ.

ಇದಾಗ್ಯೂ ಐಪಿಎಲ್​ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ ಇದುವರೆಗೆ 624 ಬೌಂಡರಿ ಬಾರಿಸಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ 600 ಬೌಂಡರಿ ಬಾರಿಸಿ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆ ಕೂಡ ಗಬ್ಬರ್​ಗೆ ಸಲ್ಲುತ್ತದೆ.

ಇದೀಗ 502 ಬೌಂಡರಿಗಳೊಂದಿಗೆ ರೈನಾ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದು, ಪ್ರಸ್ತುತ ಟೂರ್ನಿ ಮುಕ್ತಾಯದ ವೇಳೆಗೆ ವಾರ್ನರ್ ಹಾಗೂ ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶ ಸುರೇಶ್ ರೈನಾ ಮುಂದಿದೆ.

ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅಲಭ್ಯತೆ ಈ ಬಾರಿ ಸಿಎಸ್ಕೆ ದೊಡ್ಡ ಹಿನ್ನಡೆಯಾಗಿದ್ದು ನಿಜ. ಆದರೆ, ಶೇನ್ ವಾಟ್ಸನ್, ಡುಪ್ಲೆಸಿಸ್, ಧೋನಿ, ಜಡೇಜಾರಂತಹ ಅನುಭವಿಗಳಿದ್ದರೂ ವಿಫಲವಾಯಿತು.

ಸುರೇಶ್ ರೈನಾ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News18 Kannada
Top