Dailyhunt Logo
  • Light mode
    Follow system
    Dark mode
    • Play Story
    • App Story
ಬಾಲಕ-ಬಾಲಕಿಯರಿಗೆ ಜಿಲ್ಲಾಮಟ್ಟದ ಈಜು ಸ್ಪರ್ಧೆ

ಬಾಲಕ-ಬಾಲಕಿಯರಿಗೆ ಜಿಲ್ಲಾಮಟ್ಟದ ಈಜು ಸ್ಪರ್ಧೆ

(ನ್ಯೂಸ್ಕಡಬ) newskadaba.com . 24. ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವೀ ಒನ್ ಅಕ್ವಾ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯನ್ನು ಆಗಸ್ಟ್ 29ರಂದು ಬೆಳಗ್ಗೆ 9ಗಂಟೆಗೆ ನಗರದ ಎಮ್ಮೆಕೆರೆ ಮಂಗಳೂರು ಸ್ಮಾರ್ಟ್ ಸಿಟಿ ಅಂತರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾಗಿದೆ.

ಈಜುಸ್ಪರ್ಧೆಗಳುಕೆಳಗಿನವಿಭಾಗಗಳಲ್ಲಿನಡೆಯಲಿದೆ:

ವಿಭಾಗ 1ರಿಂದ 5ರ ವರೆಗೆ: 2011-2013ರಿಂದ 2018ರ ವರೆಗಿನ ಇಸವಿಯಲ್ಲಿ ಜನಿಸಿದ ವಯೋಮಿತಿಯ ಬಾಲಕ/ಬಾಲಕಿಯರಿಗೆ - ( 50ಮೀ ಫ್ರೀಸ್ಟೈಲ್, 100ಮೀ ಫ್ರೀಸ್ಟೈಲ್, 50ಮೀ ಬ್ಯಾಕ್ ಸ್ಟ್ರೋಕ್, 50ಮೀ ಬ್ರೆಸ್ಟ್ ಸ್ಟ್ರೋಕ್, 50ಮೀ ಬಟರ್ ಫ್ಲೈ,).
ವಿಭಾಗ 6: 2019 ಹಾಗೂ ನಂತರ ಜನಿಸಿದ ವಯೋಮಿತಿಯ ಬಾಲಕ/ಬಾಲಕಿಯರಿಗೆ (50ಮೀ ಫ್ರೀಸ್ಟೈಲ್, 50ಮೀ ಬ್ಯಾಕ್ ಸ್ಟ್ರೋಕ್, 50ಮೀ ಕಿಕ್ ಬೋರ್ಡ್).

ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯಸ್ಥರು/ಪ್ರಾಂಶುಪಾಲರ ದೃಢೀಕೃತ ಸಹಿಯೊಂದಿಗೆ ನೋಂದಣಿ/ಪ್ರವೇಶ ಪತ್ರವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಆಗಸ್ಟ್ 27ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ನಚಿಕೇತ್: ಮೊ. ಸಂ. 9035713628) ಅಥವಾ ಮಂಗಳೂರು ವೀ ಒನ್ ಅಕ್ವಾ ಸೆಂಟರ್ ನಿರ್ದೇಶಕ (ನವೀನ್ (ಮೊ.ಸಂ. 9035587101)ರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com