( ನ್ಯೂಸ್ ಕಡಬ ) newskadaba, ಮಂಗಳೂರು ಜು .06: ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕುಂದಾಪುರದ ಹಿರಿಯ ಛಾಯಾಗ್ರಾಹಕ ಹೇರೂರು ಅಶೋಕ್ ಶೆಟ್ಟಿ (56) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಪುತ್ರ ಪನ್ನಗ (24) ಹಾಗೂ ಸ್ನೇಹಿತ ಕುಮಾರ್ ಜೊತೆ ಬೆಂಗಳೂರಿಗೆ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಕಾರಿನಲ್ಲಿ ತೆರಳಿ ಹಿಂದಿರುಗುತ್ತಿದ್ದ ವೇಳೆ ತುಮಕೂರು ಸಮೀಪ ಕಾರು ಅಪಘಾತ ಸಂಭವಿಸಿದ್ದು, ಅಶೋಕ್ ಶೆಟ್ಟಿ ಹಾಗೂ ಪುತ್ರ ಪನ್ನಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

