Dailyhunt Logo
  • Light mode
    Follow system
    Dark mode
    • Play Story
    • App Story
ಕಡಬ: ಬೈಕ್ ಡಿಕ್ಕಿಯಾಗಿ ವೃದ್ಧೆ  ಮೃತ್ಯು

ಕಡಬ: ಬೈಕ್ ಡಿಕ್ಕಿಯಾಗಿ ವೃದ್ಧೆ ಮೃತ್ಯು

(ನ್ಯೂಸ್‌ ಕಡಬ) newskadaba.com ಸೆ. 02. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲಾರ ಬಳಿ ರಸ್ತೆ ದಾಟಲು ನಿಂತಿದ್ದ ವೃದ್ಧೆಗೆ ಬೈಕ್ ಡಿಕ್ಕಿಯಾಗಿದೆ. ಕಡಬ ಗ್ರಾಮದ ಕಾಳಾರ ಪೆರ್ಲದಕೆರೆ ನಿವಾಸಿ ದಿವಂಗತ ಕೃಷ್ಣಪ್ಪ ಭಂಡಾರಿಯವರ ಪತ್ನಿ ವಾರಿಜಾ (81).

ಸೋಮವಾರ ಮಧ್ಯಾಹ್ನ ಕಡಬ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.ಗಂಡ ಹಾಗೂ ಮಕ್ಕಳಿಲ್ಲದ ವಾರಿಜಾ ಅವರು ಅಕ್ಕನ ಮಗ ಧನಂಜಯ ಅವರ ಆಸರೆಯಲ್ಲಿ ವಾಸಿಸುತ್ತಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: newskadaba.com