Dailyhunt Logo
  • Light mode
    Follow system
    Dark mode
    • Play Story
    • App Story
ಕೆ.ಎಸ್.ಆರ್.ಟಿ.ಸಿ: ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಕೆ.ಎಸ್.ಆರ್.ಟಿ.ಸಿ: ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ಕಡಬ) newskadaba.com . 24. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ ಐ.ಟಿ.ಐ ಹಾಗೂ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

.ಟಿ.. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ: 1 ವರ್ಷದ ಮೆಕ್ಯಾನಿಕ್ ಡೀಸೆಲ್(25) ತರಬೇತಿ, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (15), ಇಲೆಕ್ಟ್ರೀಷಿಯನ್ (20), ಮೋಟಾರ್ ಮೆಕ್ಯಾನಿಕ್ ವೆಹಿಕಲ್ (5), ವೆಲ್ಡರ್ (6), ಫಿಟ್ಟರ್ (19), ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್(7), ಮೆಕ್ಯಾನಿಕ್ ಆಟೋಮೊಬೈಲ್ (20), ಪಾಸಾ (16)

ಎಸ್.ಎಸ್.ಎಲ್.ಸಿವಿದ್ಯಾರ್ಹತೆಹೊಂದಿದಅಭ್ಯರ್ಥಿಗಳಿಗೆನಿಯೋಜನೆಗೆಬಾಕಿಇರುವಖಾಲಿಸ್ಥಾನಗಳವಿವರ: ಮೆಕ್ಯಾನಿಕ್ ಡೀಸೆಲ್ (33)- ತರಬೇತಿ ಅವಧಿ 2 ವರ್ಷ.

ಅರ್ಜಿ ಸಲ್ಲಿಸುವಾಗ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸೈನಿಕರ ಮಕ್ಕಳಿಗೆ ನಿಯಮಾವಳಿಯನ್ವಯ ಮೀಸಲಾತಿ ನೀಡಲಾಗುತ್ತದೆ.

ತರಬೇತಿಭತ್ಯೆ

ಐ.ಟಿ.ಐ ವಿದ್ಯಾರ್ಹತೆ ಹೊಂದಿರುವ ಶಿಶಿಕ್ಷುಗಳಿಗೆ ಒಂದು ವರ್ಷದ ಅವಧಿಯಲ್ಲಿ ತಿಂಗಳಿಗೆ ರೂ.9600 ತರಬೇತಿ ಭತ್ಯೆ ನೀಡಲಾಗುತ್ತದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವ ಶಿಶಿಕ್ಷುಗಳಿಗೆ ಮೊದಲನೇ ವರ್ಷದ ಮಾಹೆ ಯಾನ ರೂ. 8200 (ಮಡಿಕೇರಿ ಘಟಕ ಹಾಗೂ ಪುತ್ತೂರು/ ಬಿ.ಸಿ.ರೋಡ್/ ಧರ್ಮಸ್ಥಳ/ ವಿ.ಕಾ/ ವಿ.ಉಗ್ರಾಣ/ ವಿ.ಕಛೇರಿ), ಎರಡನೇ ವರ್ಷದ ಮಾಹೆಯಾನ ರೂ. 9250(ಮಡಿಕೇರಿ ಘಟಕ), ರೂ.9 020 (ಪುತ್ತೂರು/ಬಿ.ಸಿ.ರೋಡ್/ಧರ್ಮಸ್ಥಳ/ವಿ.ಕಾ/ವಿ.ಉಗ್ರಾಣ/ವಿ.ಕಛೇರಿ).

ಅಭ್ಯರ್ಥಿಗಳು ಆಯೋಗದ ವೆಬ್‍ಸೈಟ್‍ನಲ್ಲಿ ಆಗಸ್ಟ್ 30 ರೊಳಗಾಗಿ ಅರ್ಜಿ ಸಲ್ಲಿಸಿ ಸದರಿ ಅವಧಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5:30 ಗಂಟೆಯೊಳಗಾಗಿ ಹಾಗೂ ಶನಿವಾರದಂದು ಬೆಳಿಗ್ಗೆ 10ರಿಂದ ಮದ್ಯಾಹ್ನ 1.30 ರೊಳಗಾಗಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ನಿಗಮದ ವಿಭಾಗೀಯ ಕಛೇರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಬೇಕು. ಆಗಸ್ಟ್ 31 ರಂದು ಬೆಳಿಗ್ಗೆ 10 ಗಂಟೆಗೆ ಮೂಲ ದಾಖಲಾತಿಯೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿಗಳನ್ನು ಆಯೋಗದ ವೆಬ್‍ಸೈಟ್ www.apprenticeshipindia.org. ನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಬೇಕು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸಬೇಕು.
ವಿದ್ಯಾರ್ಹತೆಯ ಮೂಲ ದಾಖಲಾತಿ (ಎಸ್.ಎಸ್.ಎಲ್.ಸಿ/ಐ.ಟಿ.ಐ/ಪಿ.ಯು.ಸಿ), ಜನ್ಮ ದಿನಾಂಕದ ಬಗ್ಗೆ ದಾಖಲಾತಿ, ಪರಿಶಿಷ್ಟ ಜಾತಿ/ಪಂಗಡದ ಮೂಲ ಪ್ರಮಾಣ ಪತ್ರ, ಮಾಜಿ ಸೈನಿಕರ ಮಕ್ಕಳು ತಮ್ಮ ತಂದೆಯವರು ಸೇವೆ ಸಲ್ಲಿಸಿದ ಬಗೆಗಿನ ಮೂಲ ಧೃಢೀಕರಣ ಪತ್ರ ಹಾಗೂ ಇತ್ತೀಚೆಗಿನ ನಿಮ್ಮ 2 ಭಾವಚಿತ್ರಗಳನ್ನು ಹಾಗೂ ತಂದೆ ಮತ್ತು ತಾಯಿಯ ಹೆಸರು ವಿದ್ಯಾರ್ಹತೆಯ ದಾಖಲಾತಿಯಲ್ಲಿ ನಮೂದಿಸದಿದ್ದಲ್ಲಿ ಸದರಿಯವರ ಹೆಸರಿನ ಬಗ್ಗೆ ಆಧಾರ್‍ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಸಂದರ್ಶನದ ವೇಳೆಯಲ್ಲಿ ಹಾಜರುಪಡಿಸಬೇಕು. ಹಾಗೂ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿ ಮತ್ತು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‍ ನಿಂದ ದೃಢೀಕೃರಣ ಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳ ಮೂಲ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ದಾಖಲಾತಿಗಳ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.

ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಗೆ ಹಾಜರಾಗುವ ಮುನ್ನ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು. ಸಂರ್ದಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ- 2, ಬ್ಯಾಂಕ್ ಪಾಸ್ ಬುಕ್ ಪ್ರತಿ- 2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ ನಿಂದ ಧೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣದ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com