Dailyhunt Logo
  • Light mode
    Follow system
    Dark mode
    • Play Story
    • App Story
ನೆರಿಯಕಾಡಿನಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ಮರ ಕಡಿತ: ಓರ್ವನ ಬಂಧನ, ಭಾರಿ ಪ್ರಮಾಣದ ನಾಟಾ ವಶ

ನೆರಿಯಕಾಡಿನಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮ ಮರ ಕಡಿತ: ಓರ್ವನ ಬಂಧನ, ಭಾರಿ ಪ್ರಮಾಣದ ನಾಟಾ ವಶ

(ನ್ಯೂಸ್‌ ಕಡಬ) newskadaba.com, ಜು.03 ನೆರಿಯ ಗ್ರಾಮದ ನೆರಿಯಕಾಡು ಎಂಬಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮರ ಕಡಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ 40 ಮರದ ಹಲಗೆಗಳು ಹಾಗೂ ಮರದಿಂದ ಸಿದ್ಧಪಡಿಸಲಾಗಿದ್ದ 3 ದೊಡ್ಡ ಮರದ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.

ಜುಲೈ 2 ರಂದು ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಶಪಡಿಸಿಕೊಂಡ ಶ್ರೀಮಂತ ಮರವನ್ನು ಇಲಾಖೆಯ ಸುಪರ್ದಿಗೆ ಪಡೆಯಲಾಗಿದ್ದು, ಬೆಳ್ತಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com