Dailyhunt Logo
  • Light mode
    Follow system
    Dark mode
    • Play Story
    • App Story

ಪಾಲಿಕೆ ಆಯುಕ್ತರ ದಿಢೀರ್ ದಾಳಿ: ಲೈಸೆನ್ಸ್ ನಿಯಮ ಉಲ್ಲಂಘಿಸಿದ ಕಾಮತ್ ಹೋಟೆಲ್‌ಗೆ ನೋಟಿಸ್

(ನ್ಯೂಸ್‌ ಕಡಬ) newskadaba.com, ಸೆ. 19 . ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ 'ವಾಕ್ ವಿತ್ ಕಮಿಷನರ್' ಕಾರ್ಯಕ್ರಮದ ವೇಳೆ ಹಂಪನಕಟ್ಟೆ ಬಳಿ ಇರುವ ಕಾಮತ್ ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಲಾಯಿತು.

ಪರಿಶೀಲನೆ ಸಂದರ್ಭದಲ್ಲಿ ಹೋಟೆಲ್‌ನ ಟ್ರೇಡ್ ಲೈಸೆನ್ಸ್ ಹಾಗೂ ಇತರ ವ್ಯವಸ್ಥೆಗಳನ್ನು ಆಯುಕ್ತರು ಪರಿಶೀಲಿಸಿದರು.

ಬಳಿಕ ಹೋಟೆಲ್‌ನ ಅಡುಗೆ ಕೋಣೆಯನ್ನೂ ಪರಿಶೀಲಿಸಲಾಯಿತು. ಈ ವೇಳೆ ಹೋಟೆಲ್‌ನ ಟ್ರೇಡ್ ಲೈಸೆನ್ಸ್ ಹೆಸರಿನ ವರ್ಗಾವಣೆ (ಟ್ರಾನ್ಸ್‌ಫರ್) ಮಾಡಿಸದೆ ಹೋಟೆಲ್ ನಡೆಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದ್ದು, ಸಂಬಂಧಪಟ್ಟ ಮಾಲಕರಿಗೆ ನೋಟಿಸ್ ಜಾರಿಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವವರು ಅಗತ್ಯ ಪರವಾನಗಿಗಳನ್ನು ನಿಯಮಾನುಸಾರ ಹೊಂದಿರಬೇಕು. 'ವಾಕ್ ವಿತ್ ಕಮಿಷನರ್' ಕಾರ್ಯಕ್ರಮದ ಭಾಗವಾಗಿ ನಗರದ ವಿವಿಧ ಪ್ರದೇಶಗಳ ಪರಿಶೀಲನೆ ಮುಂದುವರಿದಿದೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com