Dailyhunt Logo
  • Light mode
    Follow system
    Dark mode
    • Play Story
    • App Story
ಸರ್ಕಾರ ರಚನೆಗೆ ದಳಪತಿ ವಿಜಯ್‌ಗೆ ಸಂಖ್ಯಾಬಲ ಸವಾಲು: ಇಂದು ಸಿಗುತ್ತಾ ಬೆಂಬಲ?

ಸರ್ಕಾರ ರಚನೆಗೆ ದಳಪತಿ ವಿಜಯ್‌ಗೆ ಸಂಖ್ಯಾಬಲ ಸವಾಲು: ಇಂದು ಸಿಗುತ್ತಾ ಬೆಂಬಲ?

(ನ್ಯೂಸ್‌ಕಡಬ) newskadaba.com, ಮೇ.07: ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ತಮಿಳಿಗ ವೆಟ್ರಿ ಕಳಗಂ (TVK) ಮುಖ್ಯಸ್ಥ, ನಟ ದಳಪತಿ ವಿಜಯ್ ಸರ್ಕಾರ ರಚನೆಗೆ ತೀವ್ರ ಕಸರತ್ತು ಆರಂಭಿಸಿದ್ದಾರೆ. ಆದರೆ ಅಧಿಕಾರದ ಗದ್ದುಗೆಯತ್ತ ಸಾಗುತ್ತಿರುವ ವಿಜಯ್‌ಗೆ ಇದೀಗ ಸಂಖ್ಯಾಬಲವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ವಿಜಯ್‌ಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವುದರಿಂದ, ಮೈತ್ರಿ ಮಾತುಕತೆಗಳು ವೇಗ ಪಡೆದುಕೊಂಡಿವೆ.108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಅಗತ್ಯವಿದೆ. ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ಘೋಷಿಸಿದರೂ, ಟಿವಿಕೆ ಬಳಿ ಈಗಿರುವ ಒಟ್ಟು ಸಂಖ್ಯೆ 112 ಮಾತ್ರ. ಹೀಗಾಗಿ ಇನ್ನೂ 6 ಶಾಸಕರ ಬೆಂಬಲಕ್ಕಾಗಿ ವಿಜಯ್ ಇತರೆ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ.

🔥 ಯಾರ ಬೆಂಬಲದತ್ತ ವಿಜಯ್ ಕಣ್ಣಿದೆ? ಪಿಎಂಕೆ - 4

ಒಟ್ಟು 10 ಶಾಸಕರ ಬೆಂಬಲ ಪಡೆಯುವ ಸಾಧ್ಯತೆಯ ಮೇಲೆ ಟಿವಿಕೆ ಲೆಕ್ಕಾಚಾರ ಹಾಕಿದೆ.

ವಿಸಿಕೆ, ಸಿಪಿಐ ಹಾಗೂ ಸಿಪಿಎಂ ಪಕ್ಷಗಳು ಬೆಂಬಲದ ಬಗ್ಗೆ ಆಂತರಿಕ ಚರ್ಚೆ ನಡೆಸುತ್ತಿದ್ದು, ಮೇ 8ರವರೆಗೆ ಸಮಯ ಕೇಳಿರುವುದಾಗಿ ಮೂಲಗಳು ತಿಳಿಸಿವೆ. ಇನ್ನೊಂದೆಡೆ "ನಮ್ಮ ಬೆಂಬಲ ಇಲ್ಲ" ಎಂದು ಅಣ್ಣಾಡಿಎಂಕೆ ಸ್ಪಷ್ಟಪಡಿಸಿರುವುದು ವಿಜಯ್‌ಗೆ ಮತ್ತೊಂದು ಹಿನ್ನಡೆಯಾಗಿದೆ.ಈ ನಡುವೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಟಿವಿಕೆ ಸಿದ್ಧತೆ ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಇಂದು ಮೈತ್ರಿ ಪಕ್ಷಗಳಿಂದ ಅಧಿಕೃತ ಬೆಂಬಲ ಘೋಷಣೆಯಾಗುತ್ತದೆಯೇ ಎಂಬುದರತ್ತ ರಾಜ್ಯದ ರಾಜಕೀಯ ಚಿತ್ತ ನೆಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: newskadaba.com