Friday, 07 Aug, 11.33 am ನ್ಯೂಸ್ ಕನ್ನಡ ನುಡಿ

Posts
ಸುಖೋಯ್ ಎಂಬ ಅತ್ಯಾಧುನಿಕ ಯುದ್ಧ ವಿಮಾನವನ್ನು ಸೇನೆಗೆ ಸೇರಿಸಿದ್ದು ನಮ್ಮ ಹೆಮ್ಮೆಯ ಕನ್ನಡಿಗ

ನವದೆಹಲಿ: ಭಾರತೀಯ ಸೇನೆಗೆ ಆನೆ ಬಲವನ್ನು ಹೆಚ್ಚಿಸಿರುವ 5 ರಫೆಲ್ ಯುದ್ಧ ವಿಮಾನಗಳು ಈಗಾಗಲೇ ಸೇನಾ ಬತ್ತಳಿಕೆ ಸೇರಿವೆ. ಫ್ರಾನ್ಸ್ ನಿಂದ ಬುಧವಾರ ಐದು ರಫೇಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲಾ ಏರ್ ಬೇಸ್ ಗೆ ಸುರಕ್ಷಿತವಾಗಿ ಬಂದಿಳಿದಿದ್ದು, ರಾಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ವಾಟರ್ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತ ಕೋರಿತು. ಈ ಐದು ರಫೆಲ್ ಯುದ್ಧ ವಿಮಾನದ ಬೆಂಗಾವಲಿಗೆ ಎರಡು ಸುಖೋಯ್-30 ಯುದ್ಧ ವಿಮಾನಗಳು ಹೋಗಿದ್ದವು. ಐದು ಆಧುನಿಕ ವಿಮಾನಗಳಿಗೆ ಎರಡು ವಿಮಾನಗಳು ಬೆಂಗಾವಲು ಸಾಕು ಎಂದರೆ ರಫೆಲ್ ಗಿಂತ ಹೆಚ್ಚಿನ ಸಾಮರ್ಥ್ಯ ಸುಖೋಯ್ ಗಿದೆ ಎಂದರ್ಥ. ಸುಖೋಯ್ ಎಂಬ ಅತ್ಯಾಧುನಿಕ ಯುದ್ಧ ವಿಮಾನವನ್ನು ಭಾರತ ವಾಯುಸೇನೆಗೆ ಸೇರಿಸಿದ್ದು, ನಮ್ಮ ಹೆಮ್ಮೆಯ ಕನ್ನಡಿಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಎಂಬುದು ಇಡೀ ಕರುನಾಡೇ ಹೆಮ್ಮೆ ಪಡುವ ವಿಷಯ.

ಇನ್ನು ರಫೆಲ್ ವಿಚಾರಕ್ಕೆ ಬರುವುದಾದರೆ ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಾಫೆಲ್ ಫೈಟರ್ ಜೆಟ್ ವಿಮಾನಗಳು ಭಾರತಕ್ಕೆ ಬಂದಿದ್ದು, ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್ ಗಳಾಗಿವೆ. ಭಾರತವು ಸೆಪ್ಟೆಂಬರ್ 2016 ರಲ್ಲಿ ಫ್ರಾನ್ಸ್‌ನೊಂದಿಗೆ 36 ರಫೆಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳಾಗಿದ್ದು, ಅವುಗಳಲ್ಲಿ 5 ರಫೆಲ್ ಫೈಟರ್ ಜಟ್ ಗಳು ಇದೀಗ ಭಾರತೀಯ ಸೇನೆ ಬತ್ತಳಿಕೆ ಸೇರಿವೆ ಈ ಮೂಲಕ ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯ ಇನ್ನಷ್ಟು ಹೆಚ್ಚಿವೆ.

ಅನ್ಯರಾಷ್ಟ್ರಗಳನ್ನು ಕೆಣಕುವ ಹಾಗೂ ಭಾರತದ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕೂಡ ಇದೀಗ ಭಾರತ ಖರೀದಿಸಿರುವ ರಫೇಲ್ ಯುದ್ಧವಿಮಾನದ ಮೂಲಕ ಆತಂಕಕ್ಕೀಡಾಗಿವೆ. ಫ್ರಾನ್ಸ್​ನೊಂದಿಗೆ ನರೇಂದ್ರ ಮೋದಿ ಸರ್ಕಾರ ಪರಿಷ್ಕೃತ ಒಪ್ಪಂದ ಮಾಡಿಕೊಂಡ ನಾಲ್ಕು ವರ್ಷಗಳ ತರುವಾಯ ಮತ್ತು ಭಾರತದಲ್ಲಿ ನಡೆದ ‘ರಾಜಕೀಯ ಸಮರ’ದ ನಂತರ ಕಡೆಗೂ ಮೊದಲ ಹಂತದಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ವಾಯುಪಡೆಗೆ ಸೇರುವ ಮೂಲಕ, ಅದರ ಬಲ ಹೆಚ್ಚಿಸಿವೆ.

ರಫೆಲ್ ಯುದ್ಧ ವಿಮಾನ ಎರಡು ಎಂಜಿನ್ ಹೊಂದಿದ್ದು, ಇದು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿ ಮಾಡಬಹುದು. ಪ್ರತಿಯೊಂದು ರೀತಿಯ ಕಾರ್ಯಾಚರಣೆಯಲ್ಲಿ ಕಳುಹಿಸಬಹುದು. ಇದರಲ್ಲಿ ಪರಮಾಣು ಬಾಂಬ್‌ಗಳನ್ನು ಅಳವಡಿಸಬಹುದು. ಒಬ್ಬರು ಒಂದು ನಿಮಿಷದಲ್ಲಿ 60 ಸಾವಿರ ಅಡಿ ಎತ್ತರಕ್ಕೆ ಹೋಗಬಹುದು. ರಫೆಲ್ ಗಂಟೆಗೆ 2,130 ಕಿ.ಮೀ ವೇಗದಲ್ಲಿ ಹಾರಬಲ್ಲದು. ರಫೆಲ್ 3700 ಕಿ.ಮೀ ದೂರದಲ್ಲಿರುವ ಗುರಿಯನ್ನು ನಾಶಪಡಿಸಬಲ್ಲದು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: nyus kannada nudi
Top