Friday, 23 Apr, 9.46 am Oneindia

ಐಪಿಎಲ್​ 2021
ಐಪಿಎಲ್ 2021: ಗಾಯದ ಕಾರಣದಿಂದ ಉಳಿದ ಪಂದ್ಯಗಳಿಗೆ ಟಿ ನಟರಾಜನ್ ಅಲಭ್ಯ ಸಾಧ್ಯತೆ

ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ ನಟರಾಜನ್ ಕಲೆದ ಎರಡು ಪಂದ್ಯಗಳಿಂದ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ನಟರಾಜನ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿಯನ್ನು ತಂಡದ ಮ್ಯಾನೇಜ್‌ಮೆಂಟ್ ನೀಡಿತ್ತು. ಈಗ ಇಡೀ ಟೂರ್ನಿಯಿಂದಲೇ ನಟರಾಜನ್ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ನಟರಾಜನ್ ಮೊಣಕಾಲಿನ ನೋವಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಸನ್‌ರೈಸರ್ಸ್ ಪರವಾಗಿ ಮುಂದಿನ ಎಲ್ಲಾ ಪಮದ್ಯಗಳಿಂದಲೂ ನಟ್ಟು ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಪಿಎಲ್ 2021 : ಚೆನ್ನೈ - ಕೊಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶ ಮತ್ತು ನಿರ್ಮಾಣವಾದ ದಾಖಲೆಗಳು

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ಈ ವಿಚಾರವಾಗಿ ಅಧಿಕೃತವಾಗಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಕ್ರಿಕ್ ಬಜ್ ಈ ಬಗ್ಗೆ ವರದಿಯನ್ನು ಮಾಡಿದ್ದು ತಂಡದಿಂದ ಇನ್ನಷ್ಟೇ ಅಧಿಕೃತವಾಗಿ ಖಚಿತವಾಗಬೇಕಿದೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ನಟರಾಜನ್ ಅದ್ಭುತ ದಾಳಿಯ ಮೂಲಕ ಗಮನ ಸೆಳೆದಿದ್ದರು. ಹೈದರಾಬಾದ್ ಪರವಾಗಿ ನೀಡಿದ ಶ್ರೇಷ್ಠ ಪ್ರದರ್ಶನದ ಕಾರಣದಿಂದಾಗಿ ನಟರಾಜನ್ ಭಾರತೀಯ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದರು. ಭಾರತ ತಂಡದ ಪರವಾಗಿ ಆಸ್ಟ್ರೇಲಿಯಾದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ ನಟರಾಜನ್.

source: oneindia.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: OneIndia Kannada
Top