Dailyhunt Logo
  • Light mode
    Follow system
    Dark mode
    • Play Story
    • App Story
*ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ವಾರ್ಡನ್: ಮನನೊಂದು ವಸತಿ ಶಾಲೆ ವಿದ್ಯಾರ್ಥಿ ನಾಪತ್ತೆ*

*ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ ವಾರ್ಡನ್: ಮನನೊಂದು ವಸತಿ ಶಾಲೆ ವಿದ್ಯಾರ್ಥಿ ನಾಪತ್ತೆ*

Pragativahini 1 day ago

ಪ್ರಗತಿವಾಹಿನಿ ಸುದ್ದಿ: ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆಯ ಪುಷ್ಪಾ ಮಹಾಲಿಂಗಪ್ಪ ವಸತಿ ಶಾಲೆಯ ವಿದ್ಯಾರ್ಥಿ 16 ವರ್ಷದ ಜೀವನ್ ನಾಪತ್ತೆಯಾಗಿರುವ ವಿದ್ಯಾರ್ಥಿ. ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಹತ್ತನೇ ತರಗತಿ ವಿದ್ಯಾಅರ್ಥಿ ಜೀವನ್ ಯುನಿಫಾರ್ಮ್ ಬಿಟ್ಟು ಬೇರೆ ಬಟ್ಟೆ ಧರಿಸಿ ಬಂದಿದ್ದ.

ಇದಕ್ಕೆ ವಸತಿ ಶಾಲೆಯ ವಾರ್ಡನ್ ಬೈದು, ಬಟ್ಟೆ ಬಿಚ್ಚಿಸಿದ್ದರಂತೆ.

ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ ಬರುವುದಾಗಿ ಹೇಳಿದರೂ ವಾರ್ಡನ್ ಇಲ್ಲಿಯೇ ಬಟ್ಟೆ ಬಿಚ್ಚುವಂತೆ ಬೈದಿದ್ದರಂತೆ. ಇತರ ವಿದ್ಯಾರ್ಥಿಗಳ ಮುಂದೆ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದರಂತೆ. ಇದೇ ವಿಚಾರವಾಗಿ ಜೀವನ್ ತೀವ್ರವಾಗಿ ಮನನೊಂದಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಊಟದ ಬಳಿಕ ಜೀವನ್ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದಾನೆ.

ವಾರ್ಡನ್ ನೀಡುತ್ತಿದ್ದ ಹಿಂಸೆ, ಕಿರುಕುಳಕ್ಕೆ ನೊಂದು ಮಗ ನಾಪತ್ತೆಯಾಗಿದ್ದಾಗಿ ಪೋಷಕರು ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

*ಉಕ್ಕು ಕಾರ್ಖಾನೆಯಲ್ಲಿ ಭೀಕರ ಬೆಂಕಿ ದುರಂತ: ಮೂವರು ಎಂಜಿನಿಯರ್ ಗಳು ದುರ್ಮರಣ*

Dailyhunt
Disclaimer: This content has not been generated, created or edited by Dailyhunt. Publisher: Pragativahini