Dailyhunt Logo
  • Light mode
    Follow system
    Dark mode
    • Play Story
    • App Story
*ಬೆಳಗಾವಿ ಜಿಲ್ಲೆಯ ಮುಡಿಗೆ ಸಾಧನೆಯ ಗರಿ: PMFME ಯೋಜನೆಯಡಿ ವಿಶೇಷ ಸಾಧನೆ*

*ಬೆಳಗಾವಿ ಜಿಲ್ಲೆಯ ಮುಡಿಗೆ ಸಾಧನೆಯ ಗರಿ: PMFME ಯೋಜನೆಯಡಿ ವಿಶೇಷ ಸಾಧನೆ*

Pragativahini 2 weeks ago

ಪ್ರಗತಿಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: PMFME ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ರಾಜ್ಯವು ಉತ್ತಮ ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ಮುಂಚೂಣಿಯಲ್ಲಿರುತ್ತದೆ.

ಯೋಜನೆಯು 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಸಚಿವಾಲಯ ವತಿಯಿಂದ ಅಗಸ್ಟ 24 ಮತ್ತು 25 2026 ರಂದು ನವದೆಹಲಿಯಲ್ಲಿ PMFME Conclave ಯನ್ನು ಆಯೋಜಿಸಿ ಉತ್ತಮ ಪ್ರಗತಿ ಸಾಧಿಸಿದ ರಾಜ್ಯ ಮತ್ತು ರಾಜ್ಯಗಳ ಜಿಲ್ಲೆಗಳ ಅಧಿಕಾರಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸದರಿ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಜಂಟಿ ಕೃಷಿ ನಿರ್ದೆಶಕರು, ಬೆಳಗಾವಿ ಇವರನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ ಕೇಂದ್ರ ಸಚಿವರಾದ ಚಿರಾಗ ಪಾಸ್ವಾನ ಇವರು ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿರುತ್ತಾರೆ.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (PMFME) ಯೋಜನೆಯಡಿ ಜಿಲ್ಲೆಯ 1279 ಕಿರು ಉದ್ದಿಮೆದಾರರಿಗೆ ರೂ. 97.14 ಕೋಟಿ ಬ್ಯಾಂಕ ಸಾಲ ಮಂಜೂರು ಮಾಡಿ ಇದರಲ್ಲಿ 36.61 ಕೋಟಿ ರೂ.ಗಳ ಸಹಾಯಧನ ಒದಗಿಸಲಾಗಿರುತ್ತದೆ. ಜಿಲ್ಲಾಧಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ ಇವರ ಸತತ ಮಾರ್ಗದರ್ಶನ ಬೆಂಬಲ ಹಾಗೂ ವಿವಿಧ ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ ಇಲಾಖೆಯು ಹೆಚ್ಚಿನ ಕಿರು ಉದ್ದಿಮೆದಾರರನ್ನು ಗುರುತಿಸಿ ಸಹಾಯಧನ ನೀಡಿ ರಾಜ್ಯದಲ್ಲಿಯೇ ಗಣನೀಯ ಸಾಧನೆ ಮಾಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

*ತುರ್ತು ಸಂದರ್ಭ, ರೌಡಿಗಳ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ಸಿಎಂ ಡಿಕೆಶಿ*

Dailyhunt
Disclaimer: This content has not been generated, created or edited by Dailyhunt. Publisher: Pragativahini