Dailyhunt Logo
  • Light mode
    Follow system
    Dark mode
    • Play Story
    • App Story
*ಬೀದಿನಾಯಿಯನ್ನು ಮರಕ್ಕೆ ನೇತುಹಾಕಿ ಹೊಡೆದು ಕೊಂದ ದುಷ್ಕರ್ಮಿಗಳು*: *ವಿಡಿಯೋ ವೈರಲ್*

*ಬೀದಿನಾಯಿಯನ್ನು ಮರಕ್ಕೆ ನೇತುಹಾಕಿ ಹೊಡೆದು ಕೊಂದ ದುಷ್ಕರ್ಮಿಗಳು*: *ವಿಡಿಯೋ ವೈರಲ್*

Pragativahini 8 hrs ago

ಪ್ರಗತಿವಾಹಿನಿ ಸುದ್ದಿ: ಇದೆಂತಹ ವಿಲಕ್ಷಣ ಕೃತ್ಯ. ಬೀದಿ ನಾಯಿಯನ್ನು ಮರಕ್ಕೆ ನೇತುಹಾಕಿ ಕ್ರೂರವಾಗಿ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಶ್ವಾನ ಪ್ರಿಯೆ ನಿಶ್ಚಿಂತ ನರೇನ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುನೀತ್, ಮುರಳಿ ಹಾಗೂ ಮುನಿಯಪ್ಪ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರಿನ ಗುಂಜೂರಿನ ಗ್ರೀನ್ ವುಡ್ ಹೈಸ್ಕೂಲ್ ಬಳಿ ಇರುತ್ತಿದ್ದ ಬೀದಿನಾಯಿಯನ್ನು ಏರಿಯಾ ಸುತ್ತಮುತ್ತಲಿನ ಮುನಿಯಪ್ಪ, ಮುರಳಿ ಹಾಗೂ ಪುನೀತ್ ಎಂಬುವರು ಮರಕೆ ಕಟ್ಟಿಹಾಕಿ ಕ್ರೂರವಾಗಿ ಹೊಡೆದು ಹೊಡೆದು ಸಾಯಿಸಿದ್ದಾರೆ. ಈ ಘಟನೆ ಶಾಲೆಯ ಎದುರು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವರ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಸಿಟಿವಿ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೀದಿನಾಯಿಯ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

*70ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧ*: *ಆಯ್ಕೆಯಾದರೂ ಸಿಗದ ಸೀಟು*: *ಹೈಕೋರ್ಟ್ ಹೇಳಿದ್ದೇನು?*

Dailyhunt
Disclaimer: This content has not been generated, created or edited by Dailyhunt. Publisher: Pragativahini