Dailyhunt Logo
  • Light mode
    Follow system
    Dark mode
    • Play Story
    • App Story
*ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿ*: *ಹಲವು ಮಹತ್ವದ ಬದಲಾವಣೆ*

*ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿ*: *ಹಲವು ಮಹತ್ವದ ಬದಲಾವಣೆ*

Pragativahini 5 hrs ago

ಪ್ರಗತಿವಾಹಿನಿ ಸುದ್ದಿ: ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಭಾರಿ ಬದಲಾವಣೆಯಾಗುತ್ತಿದ್ದು, ಹೊಸ ನಿಯಮಗಳು ಜಾರಿಗೆ ಬರಲಿವೆ. ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರಿಗೆ ಸೇವೆಗಳನ್ನು ಹೆಚ್ಚು ಪಾರದರ್ಶಕ ಹಾಗೂ ಸುಲಭಗೊಳಿಸಲು ಕೇಂದ್ರ ಸರ್ಕಾರವು ಚಾಲನಾ ಪರವಾನಗಿ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ.

ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕೆಂದರೆ ಡ್ರೈವಿಂಗ್ ಸ್ಕಿಲ್ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ ಅಂಕವನ್ನು ಶೇ. 75ಕ್ಕೆ ಏರಿಸುವ ಪ್ರಸ್ತಾಪ ಇದೆ. ಕೆಲ ಆನ್​ಲನ್ ಸರ್ವಿಸ್​ಗಳಿಗೆ ಶುಲ್ಕದಲ್ಲಿ ವಿನಾಯಿತಿ ಕೊಡುವುದು, ಲೈಸೆನ್ಸ್ ಹೆಸರು, ವಿಳಾಸ ಬದಲಾವಣೆಗೆ ಡೆಡ್​ಲೈನ್​ಗಳನ್ನು ಪರಿಷ್ಕರಿಸುವುದು, ಹೀಗೆ, ವಿವಿಧ ಬದಲಾವಣೆಗಳನ್ನು ತರಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಡ್ರೈವಿಂಗ್ ಲೈಸನ್ಸ್ ನಲ್ಲಿ ಜಾರಿಗೆ ಬರಲಿರುವ ಅಥವಾ ಪ್ರಸ್ತಾವನೆಯಲ್ಲಿರುವ ಪ್ರಮುಖ ಬದಲಾವಣೆಗಳು ಯಾವವು ಎಂಬ ಬಗ್ಗೆ ಇಲಿದೆ ಮಾಹಿತಿ.

ಡ್ರೈವಿಂಗ್ ಟೆಸ್ಟ್ ನಲ್ಲಿ ಪಾಸಾಗಲು ಶೇ. 75ರಷ್ಟು ಅಂಕ ಕಡ್ಡಾಯ:
ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡೆಸುವ ಲಿಖಿತ ಅಥವಾ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಠಿಣ ನಿಯಮಗಳನ್ನು ತರಲಾಗುತ್ತಿದ್ದು, ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಶೇ. 75ರಷ್ಟು ಅಂಕಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ರಸ್ತೆ ಸುರಕ್ಷತೆ ಮತ್ತು ಚಾಲನಾ ಕೌಶಲ್ಯವನ್ನು ಗಂಭೀರವಾಗಿ ಪರಿಗಣಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ವಿಳಾಸ, ಹೆಸರು ಬದಲಾವಣೆಗೆ 15 ದಿನಗಳ ಗಡುವು:
ಚಾಲನಾ ಪರವಾನಗಿಯಲ್ಲಿ ಅಥವಾ ವಾಹನಗಳ ನೋಂದಣಿಯಲ್ಲಿ (RC) ವಿಳಾಸ, ಹೆಸರು ಅಥವಾ ಮೊಬೈಲ್ ಸಂಖ್ಯೆ ಬದಲಾದಾಗ, ಆ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಕೇವಲ 15 ದಿನಗಳ ಕಠಿಣ ಗಡುವು ವಿಧಿಸುವ ಪ್ರಸ್ತಾವನೆಯಿದೆ. ನಿಗದಿತ ಅವಧಿಯೊಳಗೆ ಬದಲಾವಣೆ ಮಾಡಿಕೊಳ್ಳದಿದ್ದರೆ ದಂಡ ವಿಧಿಸುವ ಸಾಧ್ಯತೆಯಿದೆ.

ಆನ್‌ಲೈನ್ ಸೇವೆಗಳು ಉಚಿತ:
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್​ಟಿಒ (RTO) ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಡಿಎಲ್ ನವೀಕರಣ, ಹೆಸರು ಮತ್ತು ವಿಳಾಸ ಬದಲಾವಣೆ ಮತ್ತು ನಕಲು ಡಿಎಲ್ ಪಡೆಯುವಂತಹ ಕೆಲವು ನಿರ್ದಿಷ್ಟ ಆನ್‌ಲೈನ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತಗೊಳಿಸುವ ಅಥವಾ ಶುಲ್ಕವನ್ನು ಗಣನೀಯವಾಗಿ ತಗ್ಗಿಸುವ ಚಿಂತನೆಯಿದೆ.

ಖಾಸಗಿ ಡ್ರೈವಿಂಗ್ ಸ್ಕೂಲ್ ಗಳಿಗೆ ಉತ್ತೇಜನ:
ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳ ಮೂಲಕವೇ ತರಬೇತಿ ಪಡೆದು ಪರೀಕ್ಷೆ ಪಾಸ್‌ ಮಾಡುವವರಿಗೆ ಡಿಎಲ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ.

ಹೆಸರು ಮತ್ತು ವಿಳಾಸ ಬದಲಾವಣೆ ನಿಯಮ:
ಡ್ರೈವಿಂಗ್ ಲೈಸೆನ್ಸ್​ದಾರರ ಹೆಸರು ಮತ್ತು ವಿಳಾಸಗಳನ್ನು ಬದಲಾಯಿಸಲು ಸಲ್ಲಿಸಲಾಗುವ ಅರ್ಜಿಗಳ ಶೀಘ್ರ ವಿಲೇವಾರಿಗೆ ನಿಯಮಗಳನ್ನು ರೂಪಿಸಲು ಯತ್ನಿಸಲಾಗುತ್ತಿದೆ. 15 ದಿನದೊಳಗೆ ಅರ್ಜಿಯನ್ನು ತಿರಸ್ಕರಿಸುವುದೋ ಅಥವಾ ಸ್ವೀಕರಿಸುವುದೋ ವಿಲೇವಾರಿ ಆಗಬೇಕು. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಕಾರಣ ನೀಡಬೇಕು

ವಿಳಾಸ ಬದಲಾವಣೆಗೆ ಸಲ್ಲಿಸುವ ಅರ್ಜಿಗಳನ್ನು 30 ದಿನದೊಳಗೆ ವಿಲೇವಾರಿ ಮಾಡದೇ ಹೋದರೆ ಅದು ಸ್ವೀಕೃತ ಎಂದು ಪರಿಗಣಿಸಬೇಕಾಗುತ್ತದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಯಾರಿಗಾದರೂ ಆಕ್ಷೇಪಣೆಗಳು, ಸಲಹೆಗಳು ಇದ್ದರೆ 30 ದಿನದೊಳಗೆ ಸಲ್ಲಿಸಲು ಕಾಲಾವಕಾಶ ನೀಡಲಗಿದೆ.

*ರಾಜ್ಯದಲ್ಲಿ ಹೆಚ್ಚಲಿದೆ ಮಳೆ ಅಬ್ಬರ*: *ಯಾವೆಲ್ಲ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ?*

Dailyhunt
Disclaimer: This content has not been generated, created or edited by Dailyhunt. Publisher: Pragativahini