Dailyhunt Logo
  • Light mode
    Follow system
    Dark mode
    • Play Story
    • App Story
*ಹಳೆ ದ್ವೇಷ ಹಾಗೂ ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ: 6 ಜನ ಬಂಧನ*

*ಹಳೆ ದ್ವೇಷ ಹಾಗೂ ಅನೈತಿಕ ಸಂಬಂಧಕ್ಕೆ ಬಿತ್ತು ಹೆಣ: 6 ಜನ ಬಂಧನ*

Pragativahini 22 hrs ago

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಪತಿ ಹಾಗೂ ಆತನ ಸ್ನೇಹಿತರು ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಅವರು, ಸಂಕೇಶ್ವ ಪಟ್ಟಣದ ಜನತಾ ಪ್ಲಾಟ್ ನಿವಾಸಿ ಬಾಬು ಭೂಸಗೋಳ (35) ಕೊಲೆಯಾದ ದುರ್ದೈವಿ. ಆರೋಪಿಗಳು ಬಾಬು ಅವರ ತಲೆ ಕಲ್ಲಿನಿಂದ ಜಜ್ಜಿ ಹಾಗೂ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಅನೈತಿಕ ಸಂಬಂಧ ಹಾಗೂ ಹಳೆ ದ್ವೇಷ ಹಿನ್ನೆಯಲ್ಲಿ ಬಾಬು ಎಂಬಾತನ ಕೊಲೆಯಾಗಿದೆ ಎಂದರು.

ವರ್ಷಾ (35) ಎಂಬಾಕೆ ತನ್ನ ಗಂಡ ಸುಬ್ಬರಾವ್ ಬಿಟ್ಟು ಹೋಗಿ ಕೊಲೆಯಾದ ಬಾಬು ಜೊತೆ ಸಂಬಂಧ ಹೊಂದಿದ್ದಳು. ಜೊತೆಗೆ ಬಾಬುಗೆ ಸಂಕೇಶ್ವರ ಜನತಾ ಪ್ಲಾಟ್ ಮರಡಿ ಕುಟುಂಬಸ್ಥ ಜೊತೆ ದಾರಿ ವಿಚಾರವಾಗಿ ಜಗಳವಾಗಿತ್ತು.‌ ವರ್ಷಾ ಪತಿ ಮತ್ತು ಮರಡಿ ಗ್ಯಾಂಗ್ ಸ್ನೇಹಿತರು ಕೂಡ. ಹಾಗಾಗಿ ವರ್ಷಾ ಪತಿ ಹಾಗೂ ಮರಡಿ ಗ್ಯಾಂಗ್ ಸೇರಿಕೊಂಡು ಈ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಠಾಣೆಯ ಪೊಲೀಸರು ತಕ್ಷಣವೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದರು.

ವರ್ಷಾ ಪತಿ ಸುಬ್ಬರಾವ, ಅಕ್ಷಯ ಮರಡಿ (24), ಪವನ ಮರಡಿ (23), ಅನಿಲ ಮರಡಿ (27) ಸಂದೀಪ್ ಮರಡಿ (32) ಹಾಗೂ ಮರಡಿ ಕುಟುಂಬದ ಜೊತೆ ಕೆಲಸ ಮಾಡುತ್ತಿದ್ದ ಅಭಿಷೇಕ (23) ಎಂಬಾತ ಸೇರಿ ಕೊಲೆ ಮಾಡಿದ್ದಾರೆ. ಈ ಅಭಿಷೇಕ ಬಾಬು ಕೊಲೆಯಾದ ದಿನ ಬಾಬು ಮೇಲೆ ನಿಗಾ ಇಟ್ಟು ಉಳಿದ ಐದು ಜನ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ. ಈ ಕೊಲೆಗೆ ಅನೈತಿಕ‌ ಸಂಭಂದ ಕಾರಣವಲ್ಲ ಬದಲಾಗಿ ಈ ಹಿಂದೆಯು ಬಾಬು ಮೇಲೆ ಈ ಮರಡಿ ಗ್ಯಾಂಗ್ ಸಾಕಷ್ಟು ಸಲ ಕೊಲೆಗೆ ಯತ್ನಿಸಿದೆ. ವಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದೆ.‌ ಸದ್ಯ ಎಲ್ಲಾ ಆರೋಪಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮತ್ತಡ ಬೇರೆ ಯಾರಾದರು ಭಾಗಿ ಆಗಿದ್ದಾರಾ ನೋಡಬೇಕಾಗಿದೆ ಎಂದು ಎಸ್ ಪಿ ಅವರು ತಿಳಿಸಿದರು.

*ಕೇಂದ್ರ ಸಚಿವ ಜಾರ್ಜ್ ಕುರಿಯನ್ ದಿಢೀರ್ ರಾಜೀನಾಮೆ*

Dailyhunt
Disclaimer: This content has not been generated, created or edited by Dailyhunt. Publisher: Pragativahini