Dailyhunt Logo
  • Light mode
    Follow system
    Dark mode
    • Play Story
    • App Story
*ಕರ್ನಾಟಕ ಬಂದ್ ದಿನಾಂಕ ಘೋಷಣೆ*

*ಕರ್ನಾಟಕ ಬಂದ್ ದಿನಾಂಕ ಘೋಷಣೆ*

Pragativahini 3 weeks ago

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ CWRC ಹಾಗೂ CWMA ಆದೇಶ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ಘೋಷಿಸಿದ್ದಾರೆ.

ಕಾವೇರಿ ನದಿ ನೀರು ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಕನ್ನಡಪರ ಸಂಘಟನೆಗಳ ಸಭೆ ನಡೆದಿದ್ದ್ಫ಼ು, ಸಭೆಯಲ್ಲಿ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ಗೆ ತೀರ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆ ದಿನ ಯಾವುದೇ ಪರೀಕ್ಷೆಗಳಿಲ್ಲದ ಕಾರಣ ಆ.13ನ್ನು ನಿಗದಿಪಡಿಸಲಾಗಿದ್ದು, ಬಂದ್ ಸಿದ್ಧತೆಗೆ ಕನ್ನಡ ಸಂಘಟನೆಗಳಿಗೆ 12 ದಿನಗಳ ಕಾಲಾವಕಾಶ ಸಿಗಲಿದೆ. ಆಗಸ್ಟ್ 13ರಂದು ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಡೀ ಕರ್ನಾಟಕ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ರೈತ ಸಂಘಟನೆಗಳು, ಎಲ್ಲಾ ಸಂಘಟನೆಗಳು, ಆಟೋ ಚಾಲಕ ಸಂಘಟನೆ, ಕೂಲಿ ಕಾರ್ಮಿಕರು, ಹೋಟೆಲ್ ಮಾಲಿಕರ ಸಂಘಟನೆ, ಮಾಲ್ ಗಳು, ಸರ್ಕಾರಿ ನೌಕರರು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು, ಕನ್ನಡ ಚಲನಚಿತ್ರರಂಗ, ಓಲಾ, ಊಬರ್ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಪ್ರತಿಯೊಂದು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಬೇಕು. ಕೇವಲ ನೈತಿಕ ಬೆಂಬಲ ಎಂದರೆ ಸಾಲದು. ಕಾವೇರಿ ನೀರಿಗಾಗಿ ಹೋರಾಡುತ್ತಿರುವುದರಿಂದ ಇಡೀ ಕರ್ನಾಅಟಕ ಅಂದು ಸಂಪೂರ್ಣ ಬಂದ್ ಮಾಡಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

*ಸರ್ವಪಕ್ಷ ಸಭೆಯಲ್ಲಿ ನಿರ್ಧಾರವಾಗುವವರೆಗೂ ತಮಿಳುನಾಡಿಗೆ ನೀರು ಬಿಡಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ*

Dailyhunt
Disclaimer: This content has not been generated, created or edited by Dailyhunt. Publisher: Pragativahini