Dailyhunt Logo
  • Light mode
    Follow system
    Dark mode
    • Play Story
    • App Story
*ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಸತೀಶ್ ಜಾರಕಿಹೊಳಿ-ಹರಿಪ್ರಸಾದ್ ಪೈಪೋಟಿ ನಡುವೆ ಮತ್ತೋರ್ವ ನಾಯಕ ಎಂಟ್ರಿ*

*ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಸತೀಶ್ ಜಾರಕಿಹೊಳಿ-ಹರಿಪ್ರಸಾದ್ ಪೈಪೋಟಿ ನಡುವೆ ಮತ್ತೋರ್ವ ನಾಯಕ ಎಂಟ್ರಿ*

Pragativahini 2 weeks ago

ಪ್ರಗತಿವಾಹಿನಿ ಸುದ್ದಿ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಲಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ.

ಈಗಾಗಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ ಲಾಭಿ ಆರಂಭಿಸಿದ್ದಾರೆ.

ಇವರ ಜೊತೆಗೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೆಸರೂ ಕೇಳಿಬಂದಿದೆ. ಈ ಇಬರ ಪೈಪೋಟಿ ನಡುವೆ ಇದೀಗ ಮತ್ತೋರ್ವ ನಾಯಕ ಶಿವರಾಜ್ ತಂಗಡಗಿ ಕೂಡ ತನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.

ಅಹಿಂದ ಕೋಟಾದಡಿ ಸತೀಶ್ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಸತೀಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜೊತೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಇನ್ನು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರನ್ನು ಹೈಕಮಾಂಡ್ ನಾಯಕರು ಪ್ರಸಾಪಿಸಿದ್ದಾರೆ ಎನ್ನಲಾಗಿದೆ. ಒಬಿಸಿ ಸಮುದಾಯದ ಲೆಕ್ಕಾಚರದಲ್ಲಿ ಹರಿಪ್ರಸಾದ್ ಹೆಸರು ಕೇಳಿಬರುತ್ತಿದೆ

ಈ ನಡುವೆ ಶಿವರಾಜ್ ತಂಗಡಗಿ ತನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿವಂತೆ ಮನವಿ ಮಾಡಿದ್ದಾರೆ.ಒಟ್ಟಾರೆ ಮೂವರು ನಾಯಕರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಲಾಭಿ ಆರಂಭವಾಗಿದ್ದು, ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

*ರಾಜ್ಯಪಾಲರಿಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ; ರಸ್ತೆಯೇ ಬಂದ್: ಆಕ್ರೋಶಗೊಂಡ ವ್ಯಕ್ತಿಯಿಂದ ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ*

Dailyhunt
Disclaimer: This content has not been generated, created or edited by Dailyhunt. Publisher: Pragativahini