Dailyhunt Logo
  • Light mode
    Follow system
    Dark mode
    • Play Story
    • App Story
*ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ*

*ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ*

Pragativahini 3 weeks ago

ಲಿಂಗಾಯಿತ ಮಹಾಸಭಾ ಪದಾಧಿಕಾರಿಗಳ ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಕಿತ್ತೂರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ "ಬಸವ ಅಧ್ಯಯನ ಪೀಠ" ಸ್ಥಾಪಿಸಿರುವ ಕುರಿತು ಜಾಗತಿಕ ಲಿಂಗಾಯಿತ ಮಹಾಸಭೆ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ತೆರಳಿ ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ ಮತ್ತು ಸಿಂಡಿಕೇಟ್ ಸದಸ್ಯ ಡಾ.

ಮಹಾಂತೇಶ್ ಕಂಬಾರ್ ಅವರನ್ನು ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ರ‍್ನಾಟಕದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ಕುರಿತಾದ ಅಧ್ಯಯನ ಪೀಠವೊಂದನ್ನು ಸ್ಥಾಪಿಸುವಂತೆ ಸಮಾಜದ ಪರವಾಗಿ ಜಾಗತೀಕ ಲಿಂಗಾಯತ ಮಹಾಸಭೆ ಪ್ರಧಾನ ಕರ‍್ಯರ‍್ಶಿ ಡಾ.ಎಸ್.ಎಂ.ಜಾಮದಾರ ಹಾಗೂ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿಯವರ ನೇತೃತ್ವದ ನಿಯೋಗವು ಎರಡು ರ‍್ಷಗಳ ಹಿಂದೆ ಮನವಿ ಒಂದನ್ನು ಸಲ್ಲಿಸಿತ್ತು. ಅದೀಗ ಕರ‍್ಯರೂಪಕ್ಕೆ ಬಂದಿದೆ ಈ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಂಡಿರುವ ವಿಶ್ವವಿದ್ಯಾಲಯದ ಕುಲಪತಿ ತ್ಯಾಗರಾಜ್, ಸಂತೋಷ್ ಕಾಮಗೌಡ ಅವರು, ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಕಂಬಾರ್ ಹಾಗೂ ಮತ್ತಿತರರನ್ನು ಸಮಸ್ತ ಸಮಾಜದ ಪರವಾಗಿ ಅಭಿನಂದಿಸಲಾಯಿತು.

ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಖಜಾಂಚಿ ಮುರಗೆಪ್ಪ ಬಾಳಿ, ಸಿ.ಎಂ. ಬೂದಿಹಾಳ, ಪ್ರವೀಣ್ ಚಿಕ್ಕಲಿ, ಶಂಕರ್ ಗುಡುಸ್, ಅಶೋಕ್ ಬೆಂಡಿಗೇರಿ, ಶಿವಾನಂದ್ ಮೇಟ್ಯಾಳ್, ಆನಂದ್ ಗುಡುಸ, ಮಹಾನಂದಾ ಪರುಶೆಟ್ಟಿ, ಶೋಭಾ ಶಿವಳ್ಳಿ, ಕಾವೇರಿ ಕಿಲಾರಿ, ರತ್ನಾ ಬೆಣಚಿನಮರಡಿ, ಗುರು ಗೌಡಾ ಮುಂತಾದವರು ಉಪಸ್ಥಿತರಿದ್ದರು.

ಶಾಪಿಂಗ್ ಮೂಡ್ ನಲ್ಲಿ ಮಾಜಿ ಸಿಎಂ‌ ಸಿದ್ದರಾಮಯ್ಯ

Dailyhunt
Disclaimer: This content has not been generated, created or edited by Dailyhunt. Publisher: Pragativahini