Dailyhunt Logo
  • Light mode
    Follow system
    Dark mode
    • Play Story
    • App Story
*ಸಂಶೋಧನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳು ಅಗತ್ಯ: ಪ್ರೊ. ಪಿ.ಜಿ. ತಡಸದ*

*ಸಂಶೋಧನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳು ಅಗತ್ಯ: ಪ್ರೊ. ಪಿ.ಜಿ. ತಡಸದ*

Pragativahini 2 months ago

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವು ಯಾವುದೇ ಕೆಲಸದಲ್ಲಿ ತೊಡಗಿಕೊಂಡಾಗ ನೈತಿಕತೆ ಮತ್ತು ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಂಶೋಧನೆಯು ವೈಜ್ಞಾನಿಕ ಪ್ರಕ್ರಿಯೆ ಆಗಿರುವುದರಿಂದ ನಾವು ಸಂಶೋಧನೆಯ ಚೌಕಟ್ಟಿನೊಳಗೆ ಅಗತ್ಯವಾದ ಮಾರ್ಗಸೂಚಿಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.

ಪಿ.ಜಿ. ತಡಸದ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ, ಆಂತರಿಕ ಗುಣಮಟ್ಟ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗ "ಸಂಶೋಧನೆ ಮತ್ತು ಪ್ರಕಟಣೆಯ ನೀತಿಶಾಸ್ತ್ರ " ಎಂಬ ವಿಷಯದಡಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಂಶೋಧನೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ, ಆ ಅಧ್ಯಯನದ ಫಲಿತಾಂಶಗಳು ಸಮಾಜಕ್ಕೆ ದಾರಿತಪ್ಪಿಸುವಂತಾಗಬಹುದು ಹೀಗಾಗಿ ಸಂಶೋಧನಾ ವಿದ್ಯಾರ್ಥಿಗಳು, ಕೇವಲ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸುವುದಕ್ಕಿಂತ, ಅದು ಎಷ್ಟು ನೈತಿಕ ರೀತಿಯಲ್ಲಿ ಪೂರ್ಣಗೊಂಡಿದೆ ಎಂಬುದುರ ಬಗ್ಗೆ ಗಮನಹರಿಸುವುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ. ವಿಶ್ವನಾಥ್ ಅವಟಿ ಮಾತನಾಡಿ, "ಸಂಶೋಧನೆಯಲ್ಲಿ ಕೇವಲ ಫಲಿತಾಂಶಕ್ಕಿಂತ ಬೌದ್ಧಿಕ ಪ್ರಾಮಾಣಿಕತೆ ಅತ್ಯಂತ ಮುಖ್ಯವಾದುದು. ನಿಮ್ಮ ಸಂಶೋಧನಾ ವಿಧಾನವು ಕೇವಲ ತಾಂತ್ರಿಕವಾಗಿರದೆ, ಅದು ಜಾಗತಿಕ ನೈತಿಕ ಮಾನದಂಡಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗಬೇಕು. ಈ ನಿಟ್ಟಿನಲ್ಲಿ, ಪ್ರಸ್ತುತ ಕಾರ್ಯಾಗಾರವು ನಿಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಹಾದಿಗೆ ಅತ್ಯಗತ್ಯವಾದ ಬೌದ್ಧಿಕ ಅಡಿಪಾಯವನ್ನು ಹಾಕಿಕೊಡಲಿದೆ. ಎಂದು ಹೇಳಿದರು.

ಪ್ರಾಧ್ಯಾಪಕ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶದ ನಿರ್ದೇಶಕ ಪ್ರೊ. ಆರ್. ಏನ್ ಮನಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ವೃತ್ತಿ ಅವಕಾಶಕ್ಕಾಗಿ ಸ್ಕೋಪಸ್ ಮತ್ತು ವೆಬ್ ಆಫ್ ಸೈನ್ಸಸ್‌ನಲ್ಲಿ ಸೂಚ್ಯಂಕ ಮಾಡಲಾದ ಗುಣಮಟ್ಟದ ಜರ್ನಲ್‌ಗಳಲ್ಲಿ ಬಲವಾದ ಸಂಶೋಧನೆ ಮತ್ತು ಪ್ರಕಟಣೆಗಳನ್ನು ನಿರ್ಮಿಸಲು ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಎರಡು ದಿನಗಳ ಕಾರ್ಯಾಗಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದ ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಬಿ. ಎಸ್. ಶಿವರಾಮ್, ಗ್ರಂಥಾಲಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಸವಣೂರ, ಡಾ. ರಮೇಶ್ ಕುರಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿ ಅಮೃತಾ ಕಾರ್ಯಕ್ರಮವನ್ನು ನಿರೂಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Pragativahini