ಪ್ರಜಾವಾಣಿ

ಗುಬ್ಬಿ: ಜಾನುವಾರು ನಿಗೂಢ ಸಾವು

ಗುಬ್ಬಿ: ಜಾನುವಾರು ನಿಗೂಢ ಸಾವು
  • 755d
  • 1 shares

ಗುಬ್ಬಿ: ತಾಲ್ಲೂಕಿನ ರಂಗನಾಥಪುರದಲ್ಲಿ ಜಾನುವಾರುಗಳು ನಿಗೂಢವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ದಿವಾಕರ್ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ಬಳಿಕ ಮಾತನಾಡಿದ ಅವರು, 'ಜಾನುವಾರುಗಳಲ್ಲಿ ಯಾವುದೇ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ಮೇವಿನ ವ್ಯತ್ಯಾಸದಿಂದ ಅಥವಾ ಅಜೀರ್ಣದಿಂದ ಮೃತಪಟ್ಟಿರುವ ಸಾಧ್ಯತೆಗಳಿವೆ. ಸತ್ತಿರುವ ಜಾನುವಾರುಗಳ ಶವಪರೀಕ್ಷೆ ಮಾಡಲಾಗಿದೆ. ಜಾನುವಾರುಗಳ ಅಂಗಾಂಗಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದ ತಕ್ಷಣ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು.

ಈ ವರ್ಷ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಹಾಗಾಗಿ ಕುರಿ ಮತ್ತು ಮೇಕೆಗಳು ಸತ್ತರೆ ಕೊಡಲಾಗುತ್ತಿದ್ದ ಪರಿಹಾರವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

No Internet connection

Link Copied