ಬಿಹಾರ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದಲ್ಲಿನ ಸೀಟು ಹೊಂದಾಣಿಕೆಯ ಗೊಂದಲ 'ಮಹಾಘಟಬಂಧನ'ದ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಿದೆ.ನವೆಂಬರ್ 6 ಮತ್ತು 11ರಂದು ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ 'ಎನ್ಡಿಎ' ಮೈತ್ರಿಕೂಟದ ವಿರುದ್ಧ ಸ್ಪರ್ಧಿಸುತ್ತಿರುವ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ, ಆಂತರಿಕ ಸಂಘರ್ಷದಿಂದ ಬಳಲುತ್ತಿದೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲು ಪ್ರಯಾಸಪಡುತ್ತಿದೆ.