Wednesday, 27 Jan, 5.55 pm ಪ್ರಜಾವಾಣಿ

ಜಿಲ್ಲೆ
12 ವರ್ಷದ ಬಾಲಕ ನೇಣಿಗೆ ಶರಣು

ಚಿಂಚೋಳಿ: ಬಾಲಕನೊಬ್ಬ ದೊಡ್ಡ ಮರವೊಂದಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕುಂಚಾವರಂ‌ ಬಳಿಯ ಲಕ್ಷ್ಮಾಸಾಗರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ನಡೆದಿದೆ.

ಮಧುಕರ ಲಕ್ಷ್ಮಪ್ಪ (12) ಗ್ರಾಮದ ಹೊರವಲಯದಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದನ ಮೇಯಿಸಲು ಅಡವಿಗೆ ಹೋಗಿದ್ದ ಮಧುಕರ, ಅಡವಿಯಲ್ಲಿ ದನಗಳನ್ನು ಬಿಟ್ಟು ಸಮೀಪದ ಹಳ್ಳಿಯಲ್ಲಿ ನಡೆದ ಜಾತ್ರೆಗೆ ಸಂಗಡಿಗರೊಂದಿಗೆ ಹೋಗಿದ್ದರು. ಮರಳಿ ಬಂದಾಗ ಆಕಳು ಮನೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ.

ನಿಮ್ಮ ಆಕಳು ಮನೆಗೆ ಬಂದಿಲ್ಲ ನಿಮ್ಮ ತಂದೆ ತಾಯಿ ನಿನ್ನನ್ನು ಹೊಡೆಯುತ್ತಾರೆ ಎಂದು ಹೆದರಿಸಿದ್ದರಿಂದ ಮಧುಕರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಂಚಾವರಂ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಉಪೇಂದ್ರಕುಮಾರ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top