Dailyhunt Logo
  • Light mode
    Follow system
    Dark mode
    • Play Story
    • App Story
12 ವರ್ಷಗಳಲ್ಲಿ 100 ಬಾರಿ ವಿದೇಶ ಪ್ರವಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ

12 ವರ್ಷಗಳಲ್ಲಿ 100 ಬಾರಿ ವಿದೇಶ ಪ್ರವಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 12 ವರ್ಷಗಳಲ್ಲಿ 100 ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಪ್ರಧಾನಿ ಮೋದಿ ಅವರು ಇದೀಗ ಫ್ರಾನ್ಸ್‌ ಹಾಗೂ ಸ್ಲೋವಾಕಿಯಾ ಪ್ರವಾಸದಲ್ಲಿದ್ದು, ಇದು ಅವರ ನೂರನೇ ಪ್ರವಾಸವಾಗಿದೆ.

ಈ ಕುರಿತು ಪ್ರಧಾನ ಮಂತ್ರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ನರೇಂದ್ರ ಮೋದಿ ಅವರು ಮೊದಲ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2014ರ ಜೂನ್‌ 15ರಂದು ಭೂತಾನ್‌ಗೆ ಪ್ರವಾಸ ಕೈಗೊಂಡಿದ್ದರು. ಅದೇ ವರ್ಷ ಜುಲೈ 13ರಿಂದ 17ರವರೆಗೆ ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಲು ಬ್ರೆಜಿಲ್‌ಗೆ ತೆರಳಿದ್ದರು.

ಇದುವರೆಗೂ ಮೂರು ಬಾರಿ(2014, 2019, 2024) ಪ್ರಧಾನಿಯಾಗಿರುವ ಮೋದಿ, 12 ವರ್ಷಗಳ ಅವಧಿಯಲ್ಲಿ 78 ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಮೊದಲ ಅವಧಿಯಲ್ಲಿ 49, ಎರಡನೇ ಅವಧಿಯಲ್ಲಿ 27, ಮೂರನೇ ಅವಧಿಯಲ್ಲಿ 24 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani