25 ವರ್ಷಗಳ ಹಿಂದೆ; ಭಾನುವಾರ, 4-11-2001
ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಸಂಸ್ಥೆ ಆರಂಭ
ಬೆಂಗಳೂರು, ನ. 3- ಜೈವಿಕ ತಂತ್ರಜ್ಞಾನಕ್ಕೆ ಹೆಚ್ಚುತ್ತಿರುವ ಮಹತ್ವ ಹಾಗೂ ಮಾರುಕಟ್ಟೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಯೊಂದನ್ನು (ಐಬಿಎಬಿ) ಸ್ಥಾಪಿಸಲಾಗಿದೆ.
ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಐಟಿ ಡಾಟ್ ಕಾಮ್ ಮೇಳದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಅವರು ಇಂದು ಈ ವಿಷಯ ತಿಳಿಸಿದರು.
ಹಿರಿಯ ವಿಜ್ಞಾನಿ ಶರತ್‌ಚಂದ್ರ ಅವರನ್ನು ಸಂಸ್ಥೆಯ ಚೇರ್ಮನ್ ಹಾಗೂ ಪ್ರೊ. ಮಂಜು ಬನ್ಸಾಲ್ ಅವರನ್ನು ಈ ಸಂಸ್ಥೆಯ ನಿರ್ದೇಶಕಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಆಸ್ಕರ್‌ಗೆ 'ಲಗಾನ್'
ಮುಂಬೈ, ನ. 3 (ಯುಎನ್‌ಐ)- 'ಲಗಾನ್' ಹಿಂದಿ ಚಲನಚಿತ್ರವನ್ನು ಆಸ್ಕರ್ ಪ್ರಶಸ್ತಿಗಾಗಿ ಅತ್ಯುತ್ತಮ ಭಾರತೀಯ ಚಿತ್ರ ಎಂದು ನಾಮಕರಣ ಮಾಡಲಾಗಿದೆ.
ಸುಷ್ಮಾ ಶಿರೋಮಣಿಯ ನೇತೃತ್ವದ 14 ಸದಸ್ಯರ ಸಮಿತಿ ಇಂದು ಇಲ್ಲಿ ಅವಿರೋಧವಾಗಿ ಈ ಆಯ್ಕೆಯನ್ನು ಮಾಡಿದೆ.

