ಧೂಮಪಾನ ನಿಷೇಧಿಸಲು ಸುಪ್ರೀಂ ಕೋರ್ಟ್ ಆಜ್ಞೆ
ನವದೆಹಲಿ, ನ. 2 (ಪಿಟಿಐ)- ಸಾರ್ವ ಜನಿಕ ಸ್ಥಳಗಳು, ರೈಲ್ವೆ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ದೇಶ ದಾದ್ಯಂತ ಧೂಮಪಾನ ನಿಷೇಧವನ್ನು ತಕ್ಷಣ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಧೂಮಪಾನ ನಿಷೇಧ ಜಾರಿಗೆ ತರಲು ಅಗತ್ಯವಾದ ಆದೇಶ ಹೊರಡಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋರ್ಟ್ ನಿರ್ದೇಶನವನ್ನೂ ನೀಡಿತು.
ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಕಳವಳಗೊಂಡಿರುವ ಸುಪ್ರೀಂ ಕೋರ್ಟ್, ಈಗ ಈ ನಿರ್ದೇಶನದ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಒತ್ತಾಸೆಯಾಗಿ ನಿಂತಿದೆ. ಕೋರ್ಟ್ ಆದೇಶ ಸಿಗರೇಟ್ ಉದ್ಯಮದ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.

