ವಿಶ್ವಸಂಸ್ಥೆ, ಸೆ. 19 (ಪಿಟಿಐ, ಯುಎನ್‌ಐ)- ಅಮೆರಿಕದ ಮೇಲೆ ಕಳೆದ ವಾರ ನಡೆದ ಭೀಕರ ದಾಳಿಯ ಪ್ರಮುಖ ರೂವಾರಿ ಎನ್ನಲಾಗಿರುವ ಒಸಾಮಾ ಬಿನ್ ಲಾಡೆನ್‌ನನ್ನು 'ತಕ್ಷಣ ಮತ್ತು ಬೇಷರತ್ತಾಗಿ' ಒಪ್ಪಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಆದೇಶ ನೀಡಿದೆ.
ಆದರೆ, ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಒಮರ್ ಈ ಆದೇಶವನ್ನು ಬಹುತೇಕ ತಿರಸ್ಕರಿಸಿದ್ದಾರೆ. ಇದರಿಂದಾಗಿ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಇನ್ನಷ್ಟು ಪ್ರಬಲವಾಗಿವೆ.

