ನವದೆಹಲಿ: ಅಮೆರಿಕವು 250ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಜನತೆಗೆ ಶುಭಾಶಯ ಕೋರಿದ್ದಾರೆ.
ಎರಡೂ ದೇಶಗಳು ಪ್ರಜಾಪ್ರಭುತ್ವ ಮತ್ತು ಕಾನೂನಿನ ಬಗ್ಗೆ ನಂಬಿಕೆ ಇರಿಸಿವೆ.
ಈ ಎರಡೂ ದೇಶಗಳ ಜನರ ಅಪಾರ ಸಾಮರ್ಥ್ಯವು ಈ ಸ್ನೇಹವನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ರೂಪಿಸಿದೆ ಎಂದಿದ್ದಾರೆ.
ಭಾರತ ಮತ್ತು ಅಮೆರಿಕ ಕಾರ್ಯತಂತ್ರದ ಒಡಂಬಡಿಕೆಯನ್ನು ಮೀರಿದ ಬಾಂಧವ್ಯ ಹೊಂದಿವೆ.
'ಅಮೆರಿಕದ ಐತಿಹಾಸಿಕ 250ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 140 ಕೋಟಿ ಭಾರತೀಯರ ಪರವಾಗಿ ಅಧ್ಯಕ್ಷ ಮತ್ತು ಅಮೆರಿಕದ ಜನರಿಗೆ ನಾನು ಹೃತ್ಪೂರ್ವಕ ಶುಭಾಶಯ ಹೇಳಲು ಬಯಸುತ್ತೇನೆ' ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಮುಂದಿನ 250 ವರ್ಷಗಳು ಅಮೆರಿಕಕ್ಕೆ ಸಮೃದ್ಧಿ, ಶಾಂತಿ ತರಲಿ. ಭಾರತ ಮತ್ತು ಅಮೆರಿಕದ ನಡುವಿನ ಪಾಲುದಾರಿಕೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲೆಂದು ಹಾರೈಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
250ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಧ್ಯಕ್ಷ ಟ್ರಂಪ್, ವಾಷಿಂಗ್ಟನ್‌ನ ನ್ಯಾಷನಲ್ ಮಾಲ್ನನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

