ದೇವನಹಳ್ಳಿ: ಬ್ಯಾಂಕಾಕ್‌ನಿಂದ ಮಾದಕವಸ್ತು ತರುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಆತನಿಂದ ₹5.23 ಕೋಟಿ ಮೌಲ್ಯದ 14.94 ಕೆ.ಜಿ. ಹೈಡ್ರೋಪೋನಿಕ್ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ನ.1ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದು ತಪಾಸಣೆಗೆ ಒಳಪಡಿಸಿದಾಗ, ಆತ ತಂದಿದ್ದ ಬ್ಯಾಗ್‌ನಲ್ಲಿ ವಿಶೇಷವಾಗಿ ಪ್ಯಾಕ್ ಮಾಡಿದ್ದ ಮಾದಕವಸ್ತು ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹಸಿರು ಬಣ್ಣದ ಗಾಂಜಾ ತುಂಡುಗಳನ್ನು ಗಾಳಿಯಾಡದಂತೆ ವ್ಯಾಕ್ಯೂಮ್ ವಿಧಾನದಲ್ಲಿ ಪ್ಯಾಕ್ ಮಾಡಿ ಬ್ಯಾಗ್‌ನೊಳಗೆ ಬಚ್ಚಿಡಲಾಗಿತ್ತು. ಅನುಮಾನಾಸ್ಪದ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಹೈಡ್ರೋಪೋನಿಕ್ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
261104-18-1211126536

