Dailyhunt Logo
  • Light mode
    Follow system
    Dark mode
    • Play Story
    • App Story
600ನೇ ಟೆಸ್ಟ್‌ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್‌

600ನೇ ಟೆಸ್ಟ್‌ನಲ್ಲಿ ನಾಯಕತ್ವ ನನಗೆ ದೊಡ್ಡ ಗೌರವ: ಶುಭಮನ್ ಗಿಲ್‌

ಗಾಲ್‌: ಭಾರತ ಆಡುತ್ತಿರುವ 600ನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು 'ದೊಡ್ಡ ಗೌರವ' ಎಂದು ಶುಭಮನ್ ಗಿಲ್ ಹೇಳಿದ್ದಾರೆ.

ಇಂಗ್ಲೆಂಡ್ (1,097) ಮತ್ತು ಆಸ್ಟ್ರೇಲಿಯಾ (884) ತಂಡಗಳು ಮಾತ್ರ ಭಾರತಕ್ಕಿಂತ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿವೆ.

ಭಾರತದ ಸ್ವಾತಂತ್ರ್ಯ ದಿನದಂದೇ ಈ ಟೆಸ್ಟ್‌ ಪಂದ್ಯ ಆರಂಭವಾಗುತ್ತಿದೆ.

'ಭಾರತ ತಂಡವನ್ನು ಟೆಸ್ಟ್‌ ಪಂದ್ಯದಲ್ಲಿ ಮುನ್ನಡೆಸುವುದು ಗೌರವದ ವಿಷಯ. ಅದರಲ್ಲೂ 600ನೇ ಟೆಸ್ಟ್‌ ತಂಡದಲ್ಲಿ ಮುನ್ನಡೆಸುತ್ತಿರುವುದು ನನಗೊಲಿದ ದೊಡ್ಡ ಗೌರವ' ಎಂದು ಗಿಲ್ ಮಾಧ್ಯಮದವರಿಗೆ ತಿಳಿಸಿದರು.

ಭಾರತ 1932ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್‌ ಆಡಿತ್ತು. ಇಲ್ಲಿಯವರೆಗೆ 186 ಪಂದ್ಯಗಳನ್ನು ಜಯಿಸಿದ್ದು, 188ರಲ್ಲಿ ಸೋತಿದೆ. 224 ಪಂದ್ಯಗಳು ಡ್ರಾ ಆಗಿವೆ. ಒಂದು 'ಟೈ' ಪಂದ್ಯ ಸೇರಿದೆ.

ಗಂಭೀರ್ ಅವರಿಗೂ ಈ ಸರಣಿ ಮಹತ್ವದ್ದು. ಅವರ ಕೋಚ್ ಆದ ನಂತರ ಆಡಿರುವ 20 ಟೆಸ್ಟ್‌ಗಳಲ್ಲಿ ಭಾರತ ಎಂಟು ಗೆದ್ದು, ಹತ್ತನ್ನು ಸೋತಿದೆ. ಭಾರತ ಈಗ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಶ್ರೀಲಂಕಾಕ್ಕಿಂತ ಒಂದು ಸ್ಥಾನ ಮೊದಲು.

ಮೈಲಿಗಲ್ಲು:

ರಮಣೀಯ ಪರಿಸರದಲ್ಲಿರುವ ಗಾಲ್‌ ಕ್ರೀಡಾಂಗಣದಲ್ಲಿ ಇದು 50ನೇ ಟೆಸ್ಟ್‌ ಪಂದ್ಯವಾಗಿದೆ. ಏಷ್ಯಾದಲ್ಲಿ 50 ಟೆಸ್ಟ್‌ಗಳಿಗೆ ಆತಿಥ್ಯ ವಹಿಸಿರುವ ಮೊದಲ ಕ್ರೀಡಾಂಗಣವೆಂಬ ಹಿರಿಮೆ ಗಾಲ್‌ಗೆ ದಕ್ಕಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani