ಬ್ರಿಟನ್ ವಿರುದ್ಧ ಟೆಹರಾನಿನಲ್ಲಿ ಪ್ರದರ್ಶನ
ಟೆಹರಾನ್, ಅ.30- ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಟುಡೇ (ಕಮ್ಯುನಿಸ್ಟ್) ಸಂಘದಿಂದ ವ್ಯವಸ್ಥಿತವಾದ ಬ್ರಿಟಿಷ್ ವಿರೋಧಿ, ಈಜಿಪ್ಟ್ ಪರ ಪ್ರದರ್ಶನವು 5,000 ಮಂದಿ ಪರ್ಷಿಯಾ ವಿದ್ಯಾರ್ಥಿ ಹಾಗೂ ಕಾರ್ಮಿಕರಿಂದ ನಡೆಯಿತು.
ಪಾರ್ಲಿಮೆಂಟ್ ಚೌಕದ ಹೊರಗಡೆ ಪ್ರದರ್ಶನಕಾರರು ಒಂದು ನಿಮಿಷ ಮೌನವಾಚರಿಸಿ ಬ್ರಿಟಿಷರಿಂದ ಹತರಾದ ಈಜಿಪ್ಟ್ ಹುತಾತ್ಮರಿಗೆ ಸಹಾನುಭೂತಿ ತೋರಿದರು.
ಮಜಲಿಸ್ ಸಮಿತಿಗೆ ವಿದ್ಯಾರ್ಥಿ ನಿಯೋಗವೊಂದು ಸಲ್ಲಿಸಿದ ನಿರ್ಣಯದಲ್ಲಿ 'ಅಮೆರಿಕಾ, ಬ್ರಿಟಿಷ್ ಸಾಮ್ರಾಜ್ಯವಾದಿಗಳಿಗೆ ಧಿಕ್ಕಾರ' 'ಪರ್ಷಿಯಾ ತೈಲ ಈಜಿಪ್ಟ್‌ನ ಸೂಯಜ್‌ಕಾಲುವೆ ತ್ಯಜಿಸಿ' ಎಂಬ ಘೋಷಣೆಗಳೇ ಇದ್ದವು.

